Wednesday, February 5, 2025

Latest Posts

ಸ್ನಾನ ಮಾಡುತ್ತಿರು ವ್ಯಕ್ತಿಯ ಬಳಿ ಸರ್ಕಾರದ ಸೌಲಭ್ಯ ವಿಚಾರಿಸಿದ ಶಾಸಕ..

- Advertisement -

Kanpur : ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಚಣೆ ಹತ್ತಿರವಾದಂತೆ ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಬಾರಿ ರೀತಿಯಲ್ಲಿ ಕಸರತ್ತುಗಳನ್ನು ಮಾಡುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರ‍್ಯಾಲಿ (Rally), ಸಭೆ ಸಮಾರಂಭಗಳನ್ನು ಮಾಡದಂತೆ ಚುನಾವಣಾ ಆಯೋಗ (Election Commission) ಕಡಕ್ಕಾಗಿ ತಿಳಿಸಿದೆ. ಇದರಿಂದ ರಾಜಕೀಯ ಪಕ್ಷಗಳು ಜನರ ಮನೆಮನೆಗೆ ತೆರಳಿ ಮತದಾರರ ಮನಒಲಿಕೆಗೆ ಯತ್ನಿಸುತ್ತಿದ್ದಾರೆ. ಇದರ ನಡುವೆ ಕುತೂಹಲ ಹಾಗೂ ಹಾಸ್ಯದ ಸನ್ನಿವೇಶವೊಂದು ನಡೆದಿದೆ. ಅದು ಏನೇಂದರೆ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರು ಸಂದರ್ಭದಲ್ಲಿ ದಿಢೀರನೆ ಹೋದ ಕಾನ್ಪುರದ ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ ಆ ವ್ಯಕ್ತಿಗೆ ಪ್ರಶ್ನೆ ಕೇಳಿದ್ದಾರೆ. ಸ್ನಾನ ಮಾಡುತ್ತಿರು ವ್ಯಕ್ತಿ ಒಮ್ಮಲೇ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದಾನೆ. ಶಾಸಕರು ಕೇಳಿದ ಪ್ರಶ್ನೆ ನಿಮ್ಮಗೆ ರೇಷನ್ ಕಾರ್ಡ್ ಇದಿಯಾ..? ಸರ್ಕಾರದ ಎಲ್ಲ ಸೌಲಭ್ಯಗಳು ಸಿಗುತ್ತಿವೇಯಾ..? ಯಾವುದೇ ವಿಳಂಬವಿಲ್ಲದೇ ಅನುದಾನ ಪಡೆದು ನಿಮ್ಮ ಮನೆ ನಿರ್ಮಸಲಾಯಿತೇ..? ಎಂದು  ಶಾಸಕರು ಸ್ನಾನ ಮಾಡುತ್ತಿರು ವ್ಯಕ್ತಿಗೆ ಕೇಳಿದ್ದಾರೆ. ಸ್ನಾನ ಮಾಡುತ್ತಲೇ ಹೌದು,ಹೌದು ಅಂತ ಆ ವ್ಯಕ್ತಿ ಉತ್ತರಿಸಿದ್ದಾನೆ. ಇದನ್ನ ಅಲ್ಲಿನ ಶಾಸಕರು ತಮ್ಮ ಸಾಮಿಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ಸಿಕ್ಕಾಟ್ಟೆ ವೈರಲ್ ಆಗಿದೆ. ಫಲಾನುಭವಿಯ ಮನೆಗೆ ತೆರಳಿ ಅಭಿನಂದಿಸಿದ್ದೇನೆ. ಕಮಲದ ಗುರುತಿಗೆ ನಿಮ್ಮ ಮತ ಹಾಕಿ, ನನ್ನನ್ನು ಆರಿಸಿ ತನ್ನಿ ಎಂದು ನಮವಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶ (Uttar Pradesh) ವಿಧಾನಸಭಾ ಚುನಾವಣೆಯು ಫೆ.10 ರಿಂದ ಮಾರ್ಚ್ 07ರ ವರೆಗೆ ನಡೆಯಲ್ಲಿದೆ. ಚುನಾವಣೆಯು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ಕ್ಕೆ ಫಲಿತಾಂಶ ಹೋರಬೀಳಲಿದೆ.

- Advertisement -

Latest Posts

Don't Miss