Thursday, December 12, 2024

Latest Posts

Central Govt :ಕೇಂದ್ರ ಸರ್ಕಾರಕ್ಕೆ ಆರೋಗ್ಯ ತಜ್ಞರ ಪತ್ರ:

- Advertisement -

India ದಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಜ್ಞರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತ, ಕೆನಡಾ, ಯುಎಸ್ ನ 32 ಆರೋಗ್ಯ ತಜ್ಞರು ಹಾಗು ವೈದ್ಯರು ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಬರೆದಿದ್ದಾರೆ. ಇದರ ಜೊತೆಗೆ ಭಾರತೀಯ ವೈದ್ಯಕೀಯ ಸಂಘ ಮತ್ತು ವೈದ್ಯಕೀಯ ವೃತ್ತಿಪಪರರಿಗೆ ಬಹಿರಂಗ ಪತ್ರವನ್ನು ಬರೆದು ಎಚ್ಚರಿಕೆಯನ್ನು ನೀಡಿದ್ದಾರೆ.
ಕೋವಿಡ್-19 ತಪಾಸಣೆ ಮತ್ತು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ 2021 ರಲ್ಲಿ ಮಾಡಿದ ತಪ್ಪನ್ನೇ ಪುನಃ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತದೆ ಎಂಬುದಕ್ಕೆ ಸಾಕ್ಷಿಯೇ ಇಲ್ಲದಂತ ಹೌಷಧಗಳನ್ನು ಬಳಸಬೇಡಿ ,
ಏಕೆಂದರೆ ವಿಪರೀತ ಹೌಷಧಗಳ ಬಳಕೆಯಿಂದ ರೋಗಿಗಳ ಆರೋಗ್ಯದ ಮೇಲೆ ಇನ್ನಷ್ಟು ವಿಪರೀತ ಪರಿಣಾಮ ಬೀರಲಿದೆ. ಹಾಗಾಗಿ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಕೊವಿಡ್-19 ನಿವಾರಣೆ ಮಾಡಲು ಹೋರಾಡಿ ಮತ್ತು ಸೋಂಕಿತರಿಗೆ ಸರಿಯಾದ ಹೌಷಧಗಳನ್ನು ಬಳಸಲು ಸಲಹೆ ನೀಡಿ
ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

- Advertisement -

Latest Posts

Don't Miss