ಡಿ.ಕೆ. ಶಿವಕುಮಾರ್, ಸುರೇಶ್ ಸೂಚನೆ ಮೇರೆಗೆ ಸಂಗಮದಿಂದ ಪಾದಯಾತ್ರೆ ಮಾರ್ಗದುದ್ದಕ್ಕೂ ಸ್ವಚ್ಛತೆ ಕಾರ್ಯ

ಮೇಕೆದಾಟು ಪಾದಯಾತ್ರೆ ಆರಂಭಗೊಂಡ ಸಂಗಮದಿಂದ ಹಿಡಿದು ಪಾದಯಾತ್ರೆ ನಡೆದ ದಾರಿಯುದ್ದಕ್ಕೂ ಸ್ವಚ್ಛತೆ ಕಾರ್ಯ ಭರದಿಂದ ನಡೆದಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಸೂಚನೆ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಸ್ವಯಂಸೇವಕರು ಈ ಸ್ಚಚ್ಚತಾ ಕಾರ್ಯ ನಡೆಸುತ್ತಿದ್ದಾರೆ.ಪ್ಲಾಸ್ಟಿಕ್ ಕಾಲಿ ಬಾಟಲಿಗಳು, ಪ್ಲಾಸ್ಟಿಕ್ ಕವರ್ ಗಳು, ಪ್ಲೇಟ್ ಗಳು, ಕಾಗದಗಳು, ಬಳಸಿ ಬಿಸಾಡಿದ ಮಾಸ್ಕ್, ಕೈಗವಸು ಮತ್ತಿತರ ತ್ಯಾಜ್ಯಗಳನ್ನು ತೆರವು ಹಾಗೂ ವಿಲೇವಾರಿ ಮಾಡಲಾಗುತ್ತಿದೆ.

ಪಾದಯಾತ್ರೆ ನಡೆದ ಮಾರ್ಗದುದ್ದಕ್ಕೂ ಪ್ರತ್ಯೇಕ ತಂಡಗಳಲ್ಲಿ ಈ ಸ್ವಚ್ಛತೆ ಕಾರ್ಯ ನಡೆದಿದೆ.ಪಾದಯಾತ್ರೆ ವ್ಯವಸ್ಥೆಯಷ್ಟೇ ಅಚ್ಚುಕಟ್ಟು ತ್ಯಾಜ್ಯ ಸ್ವಚ್ಛತೆ, ವಿಲೇವಾರಿಯಲ್ಲೂ ನಡೆದಿದ್ದು, ಡಿ.ಕೆ. ಸಹೋದರರ ಪರಿಸರ ಮತ್ತು ಜನರ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆಗೆ ಇದು ಸಾಕ್ಷಿಯಾಗಿದೆ.

About The Author