ನೀವು ತೂಕ ಇಳಿಸೋಕ್ಕೆ ಟ್ರೈ ಮಾಡ್ತಿದ್ರೆ, ಈ ಆಹಾರಗಳನ್ನ ತಿನ್ನಲೇಬೇಡಿ…

ಮೊದಲೆಲ್ಲ ದಪ್ಪಗಿದ್ದವರು ಮನೆ ಕೆಲಸ ಮಾಡಿಕೊಂಡೇ, ತೂಕ ಇಳಿಸಿಕೊಳ್ಳುತ್ತಿದ್ದರು. ಅಂದಿನ ಆಹಾರ ಪದ್ಧತಿ ಕೂಡ ಹಾಗೇ ಇತ್ತು. ಆದ್ರೆ ಇಂದಿನ ಆಹಾರ ಪದ್ಧತಿ ಬದಲಾಗಿದೆ. ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡಿರುವ ನಾವೆಲ್ಲ ಮನೆಯಲ್ಲಿ, ಮಿಕ್ಸರ್, ಗ್ರೈಂಡರ್, ಓವನ್, ಫ್ರಿಜ್, ವಾಶಿಂಗ್ ಮಷಿನ್ ಎಲ್ಲವನ್ನೂ ಬಳಸುತ್ತಿದ್ದೇವೆ. ಅದರಿಂದ ಎಲ್ಲ ಕೆಲಸಗಳೂ ಸುಲಭವಾಗಿ ಬಿಟ್ಟಿದೆ.  ಹಾಗಾಗಿ ಮೈ ಬಗ್ಗಿಸಿ ಕೆಲಸ ಮಾಡುವ ಅವಶ್ಯಕತೆ ಅಷ್ಟಿಲ್ಲ. ಈ ಕಾರಣಕ್ಕೆ ಬೊಜ್ಜು ಬೆಳೆಯುತ್ತಿದೆ. ಹಾಗಾದ್ರೆ ನಾವು ಬೊಜ್ಜು ಕರಗಿಸಿಕೊಳ್ಳಬೇಕು ಅಂದ್ರೆ ಯಾವ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಪೊಟ್ಯಾಟೋ ಚಿಪ್ಸ್. ಆಲೂ ಚಿಪ್ಸ್ ತಿನ್ನೋದ್ರಿಂದ ನಮ್ಮ ದೇಹದ ತೂಕ ಹೆಚ್ಚಾಗತ್ತೆ. ಇದನ್ನ ಎಣ್ಣೆಯಲ್ಲಿ ಕರೆದಿರ್ತಾರೆ. ಇದಕ್ಕೆ ಕೊಂಚ ಸಕ್ಕರೆ ಅಂಶವನ್ನೂ ಬೆರೆಸಲಾಗತ್ತೆ. ಹೀಗಾಗಿ ಇದನ್ನ ತಿಂದ್ರೆ ದೇಹದ ತೂಕ ಹೆಚ್ಚಾಗತ್ತೆ. ಆದ್ದರಿಂದ ಇದು ತೂಕ ಕಡಿಮೆ ಮಾಡಿಕೊಳ್ಳೋರು ತಿನ್ನಬಾರದು. ಇನ್ನು ವೈಟ್ ರೈಸ್ ಕೂಡ ದೇಹದ ತೂಕವನ್ನ ಹೆಚ್ಚಿಸುತ್ತೆ.

ಇನ್ನು ಮಾಂಸಾಹಾರ ಸೇವಿಸುವರು ಪ್ರೊಸೆಸ್ಡ್ ಮೀಟ್ ತಿನ್ನೋದು ಒಳ್ಳೇದಲ್ಲ. ಕೆಂಪು ಮಾಂಸ ಕೂಡ ತಿನ್ನಬಾರದು. ಇದರಿಂದ ತೂಕ ಹೆಚ್ಚಾಗತ್ತೆ. ಕೂಲ್‌ಡ್ರಿಂಕ್ಸ್ ಸೇವನೆ ಹೆಚ್ಚಾದ್ರೂ ದೇಹದ ತೂಕ ಹೆಚ್ಚಾಗತ್ತೆ. ಹಾಗಾಗಿ ತೂಕ ಇಳಿಸುವವರು ಕೂಲ್ ಡ್ರಿಂಕ್ಸ್ ಬದಲು, ಎಳನೀರು, ಫ್ರೆಶ್ ಜ್ಯೂಸ್ ಕುಡಿಯಿರಿ. ಆದ್ರೆ ಯಾವುದೇ ಕಾರಣಕ್ಕೂ ಅಂಗಡಿಯಲ್ಲಿ ಸಿಗುವ ಜ್ಯೂಸ್ ಬಳಸಬೇಡಿ. ಪ್ರಿಸರ್ವೇಟಿವ್ಸ್ ಬಳಸುವ ಕಾರಣ, ಅದರಿಂದಲೂ ನಿಮ್ಮ ಆರೋಗ್ಯ ಹಾಳಾಗುವ ಜೊತೆಗೆ, ನಿಮ್ಮ ತೂಕ ಕೂಡ ಹೆಚ್ಚಾಗುತ್ತದೆ. ಇನ್ನು ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು, ಕೇಕ್, ಚಾಕೋಲೇಟ್ಸ್, ಐಸ್‌ಕ್ರೀಮ್‌ಗಳ ತ್ಯಾಗ ಮಾಡಲೇಬೇಕಾಗತ್ತೆ.

ಕೆಲವರು ಬ್ರೆಡ್, ಬನ್ ಸೇವಿಸುವಾಗ ಪೀನಟ್ ಬಟರ್ ಸೇವಿಸುತ್ತಾರೆ. ಇದರಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಕೂಡ, ತೂಕ ಹೆಚ್ಚಾಗುತ್ತದೆ. ಸ್ಲಿಮ್ ಆಗಬಯಸುವರು, ಬಿಸ್ಕೇಟ್ಸ್, ಕರಿದ ಚಿಕನ್, ಚೀಸ್ ಇವುಗಳನ್ನೆಲ್ಲ ಸೇವಿಸಲೇಬಾರದು. ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಕರಿದ ಪದಾರ್ಥವನ್ನ ಹೆಚ್ಚು ತಿಂದ್ರೂ ದಪ್ಪ ಆಗ್ತಾರೆ. ನೀವು ಇವೆಲ್ಲ ತಿನ್ನುವ ಬದಲು, ನಿಮ್ಮ ಡಯಟ್‌ ಲೀಸ್ಟ್‌ನಲ್ಲಿ ತರಕಾರಿ, ಹಣ್ಣು, ಎಳನೀರು, ಹಣ್ಣಿನ ಜ್ಯೂಸ್, ನೀರು, ಮೊಳಕೆ ಕಾಳು ಇವಿಷ್ಟನ್ನೇ ಸೇರಿಸಿಕೊಳ್ಳುವುದು ಉತ್ತಮ. ಇನ್ನು ಈ ಮೇಲೆ ಹೇಳಿದ ಆಹಾರಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುವ ಬದಲು, ಟೇಸ್ಟ್ ನೋಡೋಕ್ಕೆ ತಿಂದ್ರೆ ಅಂಥಾ ತೂಕವೇನು ಹೆಚ್ಚಲ್ಲ.

About The Author