ರಾಯಚೂರು : ನಗರದ ತಿಮ್ಮಾಪುರ ಪೇಟೆಯಲ್ಲಿರುವ ಕೆಇಬಿ (KEB) ಇಂಟಲಿಜೆನ್ಸಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಪಿಎಸ್ ಐ ಲಕ್ಷ್ಮೀ ಎನ್ನುವರ ಮನೆಯಲ್ಲಿ ಈ ಘಟನೆ ಜರುಗಿದೆ. ಸುಮಾರು 10 ಸಾವಿರ ರೂಪಾಯಿ ನಗದು ಹಣ ಹಾಗೂ ಐದಾರು ತೊಲೆ ಚಿನ್ನಾಭರಣವನ್ನ ಕಳ್ಳತನವಾಗಿದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ನೇತಾಜಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ನೇತಾಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಮನೆಯ ಬಾಗಿಲು ಮುರಿದ ಕಳ್ಳರು, ಮನೆಯಲ್ಲಿರುವ ಬಿರೋದಲ್ಲಿನ ಚಿನ್ನಾಭರಣ ಹಾಗೂ ನಗದು ಹಣವನ್ನ ದೋಚಿ ಖದೀಮರು ಪರಾರಿಯಾಗಿದ್ದಾರೆ. ಘಟನೆ ನಡೆದ ವೇಳೆ ಮನೆಯವರು ಡೂಪ್ಲೇಲೆಕ್ಸ್ ಮನೆಯ ಮಹಡಿ ಕೊಠಡಿಯಲ್ಲಿ ಮಲಗಿದ್ದರು. ರಾತ್ರಿ ಘಟನೆ ನಡೆದಾಗ ಮನೆಯೊಳಗೆ ಶಬ್ದವಾಯಿತು. ಆದರೆ ಬಡವಣೆಯಲ್ಲಿ ಏನಾದರೂ ಶಬ್ಡವಾಗಿದೆ ಎಂದು ಸುಮ್ನೆ ಮಲಗಿದ್ದಾರೆ. ಆದರೆ ಬೆಳಿಗ್ಗೆ ಎದ್ದು ಮನೆಯ ಕೊಠಡಿಯಲ್ಲಿ ನೋಡಿದಾಗ ಅಲಮಾರಿ ಬಿಗಿ ಮುರಿದು, ಚಿನ್ನಾಭರಣ ಹಾಗೂ ಹಣವನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.




