Thursday, December 12, 2024

Latest Posts

“ಬಹುಕೃತ ವೇಷಂ” ಗೆ ಭರ್ಜರಿ ಕ್ಲೈಮ್ಯಾಕ್ಸ್.

- Advertisement -

ಬಿಗ್ ಬಾಸ್” ಖ್ಯಾತಿಯ ವೈಷ್ಣವಿ ಗೌಡ ಹಾಗೂ “ಗೌಡ್ರು ಸೈಕಲ್ ” ಸಿನಿಮಾದ ನಾಯಕ ಶಶಿಕಾಂತ್ ನಾಯಕ- ನಾಯಕಿಯಾಗಿ ನಟಿಸಿರುವ ಚಿತ್ರ “ಬಹುಕೃತ ವೇಷಂ”.

ಪ್ರಶಾಂತ್ ಕೆ ಎಳ್ಳಂಪಳ್ಳಿ ಈ ಚಿತ್ರದ ನಿರ್ದೇಶಕರು. ಇವರು ಈ ಹಿಂದೆ ” ಗೌಡ್ರು ಸೈಕಲ್” ಚಿತ್ರ ನಿರ್ದೇಶನ ಮಾಡಿದ್ದರು.

ಯಾರು ಊಹಿಸಲಾಗದ ರೀತಿಯಲ್ಲಿ ನಮ್ಮ ಚಿತ್ರದ ಕ್ಲೈಮ್ಯಾಕ್ಸ್ ಮೂಡಿಬಂದಿದೆ. ನಾಲ್ಕುವರೆ ನಿಮಿಷದ ಒಂದೇ ಸಂಭಾಷಣೆ ಕ್ಲೈಮ್ಯಾಕ್ಸ್ ನಲ್ಲಿದ್ದು, ಶಶಿಕಾಂತ್ ಹಾಗೂ ವೈಷ್ಣವಿ ಗೌಡ ಪೈಪೋಟಿ ಮೇಲೆ ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ ನಂದ ಹಾಗೂ ಡಿ ಕೆ ರವಿ ನಿರ್ಮಾಣದ ಈ ಚಿತ್ರಕ್ಕೆ
ಅಧ್ಯಾಯ್ ತೇಜ್ ಕಥೆ ಚಿತ್ರಕಥೆ ಬರೆದಿದ್ದಾರೆ.

ವಿಜಯ ಪ್ರಕಾಶ್ ರವರು ಹಾಡಿರುವ “ಮಾತುಕತೆ ನಿಂತ ಕಥೆ ” ಹಾಡು ಹಾಗೂ “ಜೇಮ್ಸ್” ಚಿತ್ರದ ನಿರ್ದೇಶಕರಾದ ಚೇತನ್ ಕುಮಾರ್ ಬರೆದ “ಮಾಮಾಹುಷಾರು”ಹಾಡು ಈಗಾಗಲೇ ಸಿನಿರಸಿಕರ ಮನಗೆದ್ದಿದೆ.
ಲಹರಿ ಆಡಿಯೋ ಮೂಲಕ‌ ಬಿಡುಗಡೆಯಾಗಿರು ಟೀಸರ್ ಗೂ ಪ್ರಶಂಸೆ ಸಿಕ್ಕಿದೆ.

ವೈಶಾಖ್ ವಿ ಭಾರ್ಗವ್ ರವರು ನಾಲ್ಕು ಹಾಡುಗಳಿಗೆ ಅದ್ಭುತ ವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ ಪ್ರತಿಯೊಂದು ಹಾಡು ವಿಭಿನ್ನ ವಾಗಿದೆ ಇವರು ಕೂಡಾ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.. ಕಿರಣ್ ಕೃಷ್ಣ ಮೂರ್ತಿ ಯವರು ಇಡೀ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ವನ್ನು ನೀಡಿದ್ದಾರೆ.

ಛಾಯಾಗ್ರಾಹಕ ಹರ್ಷಕುಮಾರ್ ಗೌಡ ಪ್ರತಿಯೊಂದು ದೃಶ್ಯ ವನ್ನು ತುಂಬಾನೇ ಚೆನ್ನಾಗಿ ಸೆರೆ ಹಿಡಿದಿದ್ದಾರೆ.

ಹಾಗೆಯೇ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ “ಸಿನಿಮಾಗೆ ಸಂಕಲನ ಮಾಡಿರೋ ಜ್ಞಾನೇಶ್ ಬಿ ಮಾತಾಡ್ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ.

ಎಲ್ಲಾ ಕೆಲಸಗಳು ಪೂರ್ಣ ಗೊಂಡಿದ್ದು ಚಿತ್ರದ ಸೆನ್ಸಾರ್ ಕೂಡಾ ಮುಗಿದಿದೆ . ಇನ್ನೇನು ಕೆಲವೇ ದಿನಗಳಲ್ಲಿ “ಬಹುಕೃತ ವೇಷಂ” ಚಿತ್ರ ಕರ್ನಾಟಕ ರಾಜ್ಯಾದ್ಯಂತ ತೆರೆಕಾಣಲಿದೆ..

ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿ ಗಲ್ಲಾಗುವುದಂತೂ ಖಚಿತ ಎಂಬ ಅಭಿಪ್ರಾಯ ಚಿತ್ರ ತಂಡದ್ದು‌.

- Advertisement -

Latest Posts

Don't Miss