ಇಂದಿನ ಕಾಲದಲ್ಲಿ ಎಲ್ಲರೂ ಬ್ಯೂಸಿನೇ ಆಗಿರ್ತಾರೆ. ಅದರ ಮಧ್ಯೆ ಫಿಟ್ ಆಗಿರಬೇಕು, ಸುಂದರವಾಗಿರಬೇಕು ಅಂತಾ, ಡಯಟ್ ಮಾಡ್ತಾರೆ. ಆದ್ರೆ ನಾವು ಮಾಡೋ ಡಯಟ್, ನಮ್ಮ ಆರೋಗ್ಯವನ್ನು ಕಾಪಾಡಬೇಕೆ ವಿನಃ, ನಮ್ಮ ಜೀವ ತೆಗೆಯುವ ಹಾಗಿರಬಾರದು. ಯಾಕಂದ್ರೆ ಕೆಟೋ ಎಂಬ ಡಯಟ್ ಮಾಡಿ, ಕೆಲವರು ಯವ್ವನದಲ್ಲೇ ತಮ್ಮ ಜೀವನ ಪಯಣ ಮುಗಿಸಿದ್ದಾರೆ. ಹಾಗಾದ್ರೆ ಕೆಟೋ ಡಯಟ್ ಅಂದ್ರೇನು..? ಇದು ಮಾಡುವಾಗ ಯಾಕೆ ಹುಷಾರಾಗಿರಬೇಕು..? ಇದಕ್ಕೆ ಡಯಟೀಶಿಯನ್ ಅವಶ್ಯಕತೆ ತುಂಬಾನೇ ಮುಖ್ಯವಾಗಿರುವುದೇಕೆ..? ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ನಾವೆಲ್ಲ ತಿನ್ನುವ ಆಹಾರ ಮೂರು ತರಹದ್ದಾಗಿರುತ್ತದೆ. ಒಂದು ಕಾರ್ಬೋ ಹೈಡ್ರೇಟ್, ಎರಡನೇಯದು ಪ್ರೋಟೀನ್ಸ್, ಮೂರನೇಯದು ಫ್ಯಾಟ್ಸ್. ಮೊದಲನೇಯ ಆಹಾರ ಸಕ್ಕರೆಯಂಶದಿಂದ ಕೂಡಿದ್ದು, ಸಿಹಿ ತಿಂಡಿ, ಅನ್ನ, ಪಲ್ಯ, ಇತ್ಯಾದಿ. ಎರಡನೇಯದು ಆರೋಗ್ಯಕವಾಗಿದ್ದು, ಪೋಷಕಾಂಶಗಳಿಂದ ಕೂಡಿದ್ದು,, ಬೇಳೆಕಾಳು, ಪನೀರ್, ಮೊಳಕೆಕಾಳುಗಳ ಪಲ್ಯ, ಸಾರು ಇತ್ಯಾದಿ. ಇನ್ನು ಮೂರನೇಯದು ಕೊಬ್ಬಿನ ಅಂಶವುಳ್ಳದ್ದು. ತುಪ್ಪ, ಬೆಣ್ಣೆ, ಎಣ್ಣೆಯಿಂದ ಮಾಡಿದ ತಿಂಡಿಗಳು. ಒರ್ವ ಮನುಷ್ಯ ನಾರ್ಮಲ್ ಡಯಟ್ ಮಾಡುವಾಗ, 60ರಿಂದ 70 ಪರ್ಸೆಂಟ್ ಕಾರ್ಬೋ ಹೈಡ್ರೇಟ್ ಅಂಶವಿರುತ್ತದೆ. 15ರಿಂದ 20 ಪರ್ಸೆಂಟ್ ಪ್ರೋಟಿನ್ ಇರುತ್ತದೆ. 10 ಪರ್ಸೆಂಟ್ ಫ್ಯಾಟ್ ಇರುತ್ತದೆ. ಆದ್ರೆ ಕೆಟೋ ಡಯಟ್‌ನಲ್ಲಿ ಇದು ಉಲ್ಟಾ ಆಗತ್ತೆ. ಇಲ್ಲಿ ಕಾರ್ಬೋಹೈಡ್ರೇಟ್ ಅಂಶವನ್ನ ಸಿಕ್ಕಾಪಟ್ಟೆ ಕಡಿಮೆ ಮಾಡಲಾಗತ್ತೆ.
ಕಾರ್ಬೋಹೈಡ್ರೇಟ್ ಅಂಶ ಮನುಷ್ಯನ ದೇಹದ ಪೆಟ್ರೋಲ್ ಇದ್ದ ಹಾಗೆ. ಪೆಟ್ರೋಲ್ ಇದ್ದಷ್ಟು ಗಾಡಿ ವೇಗವಾಗಿ, ಆರಾಮವಾಗಿ ಓಡತ್ತೆ. ಆದ್ರೆ ಪೆಟ್ರೋಲ್ ಕಡಿಮೆಯಾದ್ರೆ, ಗಾಡಿಯ ಶಕ್ತಿ ಕೂಡ ಕಡಿಮೆಯಾಗತ್ತೆ. ಅದೇ ರೀತಿ, ದೇಹದಲ್ಲಿ ಕಾರ್ಬೋ ಹೈಡ್ರೇಟ್ ಪ್ರಮಾಣ ಕಡಿಮೆಯಾದ್ರೆ, ಮನುಷ್ಯನ ದೇಹದಲ್ಲಿ ಶಕ್ತಿ ಕಡಿಮೆಯಾಗತ್ತೆ. ಅಂತೆಯೇ ತೂಕ ಕೂಡ ಕಡಿಮೆಯಾಗತ್ತೆ.
ಹೀಗಾಗಿ ಇದು ಕೆಲವೇ ದಿನಗಳ ಡಯಟ್. ಆದ್ರೆ ಕೆಲವರು, ಈ ಡಯಟ್ ಬಗ್ಗೆ ಮಾಹಿತಿ ಇಲ್ಲದೇ, ಡಯಟಿಶಿಯನ್ ಇಲ್ಲದೇ, ತಾವಾಗಿಯೇ ಡಯಟ್ ಮಾಡಲು ಹೋಗಿ, ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಡಯಟಿಶಿಯನ್‌ಗಳಿಗೆ ಈ ಡಯಟ್ ಬಗ್ಗೆ ಮಾಹಿತಿ ಗೊತ್ತಿರುತ್ತದೆ. ಯಾವ ಆಹಾರ ಎಷ್ಟು ತಿನ್ನಬೇಕು, ಎಷ್ಟು ಹೊತ್ತು, ಮತ್ತು ಎಷ್ಟು ದಿನ ತಿನ್ನಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಡಯಟ್ ಮಾಡುವ ಮುನ್ನ ಡಯಟಿಶಿಯನ್ ಸಲಹೆ ಪಡೆಯುವುದು ಉತ್ತಮ.,




