ಉತ್ತರಪ್ರದೇಶದ ಮೀರತ್ (Meerat) ನಲ್ಲಿ ಚುನಾವಣೆ ಪ್ರಚಾರ (Election campaign) ಮಾಡಿ ನಿನ್ನೆ ದೆಹಲಿಗೆ ಬರುತ್ತಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಕಾರಿನ ಮೇಲೆ ಗುಂಡು ಹಾರಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಅಸಾದುದ್ದೀನ್ ಓವೈಸಿ ಎಲ್ಲರೂ ಸುರಕ್ಷಿತವಾಗಿದ್ದಾರೆ, ಗುಂಡು ಹಾರಿಸಿದ ವ್ಯಕ್ತಿ ಆಯುಧಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ. ನಾನು ಮೀರತ್ ನಿಂದ ದೆಹಲಿಗೆ ತೆರಳುತ್ತಿರುವ ವೇಳೆ ಟೋಲ್ ಬಳಿ ಇಬ್ಬರು ದುಷ್ಕರ್ಮಿಗಳು ನನ್ನ ವಾಹನದ ಮೇಲೆ 4 ಸುತ್ತು ಗುಂಡು ಹಾರಿಸಿದ್ದಾರೆ (4 rounds fired). ಇದರ ಪರಿಣಾಮ ನನ್ನ ವಾಹನ ಪಂಚರ್ (Vehicle Puncher) ಆಗಿದ್ದು, ಹೀಗಾಗಿ ನಾನು ಬೇರೆ ವಾಹನದಲ್ಲಿ ಅಲ್ಲಿಂದ ತೆರಳಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಘಟನೆ ಸಂಬಂಧ ಈಗಾಗಲೇ ಪೊಲೀಸರು ಇಬ್ಬರು ಆರೋಪಿಯನ್ನು ಬಂಧಿಸಿ ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದೀಗ ಅವರಿಗೆ Z ಮಾದರಿಯ ಭದ್ರತೆ (Z-like security) ನೀಡಲು ಕೇಂದ್ರ ಸರ್ಕಾರ (Central government) ಆದೇಶ ನೀಡಿದೆ. crpfನ Z ಮಾದರಿ ಭದ್ರತೆ ಇರಲಿದೆ. ಪ್ರಾಣ ಬೆದರಿಕೆ ಇರುವವರಿಗೆ 4-6 NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 22 ಸಿಬ್ಬಂದಿ ಇರುವುದು ‘ಝಡ್ ಕೆಟಗರಿ’ ಭದ್ರತೆಯಾಗಿದೆ.