Thursday, October 16, 2025

Latest Posts

‘ಈಗ ವೈವಿಧ್ಯತೆಯಲ್ಲಿ ಏಕತೆ ಇಲ್ಲ, ಮುಸ್ಲಿಂಮರ ವಿರುದ್ಧ ಬರೀ ದ್ವೇಷವಿದೆ’

- Advertisement -

ಕರ್ನಾಟಕದಲ್ಲಿ ಹಿಜಬ್ ಮತ್ತು ಕೇಸರಿ ಶಾಲಿನ ಪೈಪೋಟಿ ನಡೆಯುತ್ತಿದ್ದು, ಈ ಬಗ್ಗೆ ಓಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ. ಕ್ಲಾಸಿಗೆ ಬರುವಾಗ ಹಿಜಬ್ ತೆಗೆದಿಟ್ಟು, ಸಮವಸ್ತ್ರದಲ್ಲಿ ಬರಬೇಕು ಅಂತಾ ಹೇಳಲಾಗಿದ್ದರೂ ಕೂಡ, ಇಸ್ಲಾಂ ವಿದ್ಯಾರ್ಥಿನಿಯರು ಹಿಜಬ್ ಹಾಕಿಕೊಂಡೇ ಬರುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ನಮಗೂ ಸಮಾನತೆ ಬೇಕು ಎಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಿದ್ದಾರೆ. ಈ ವಿಷಯ ಈಗ ಪ್ರಪಂಚದಾದ್ಯಂತ ಸದ್ದು ಮಾಡಿದ್ದು, ಈ ಬಗ್ಗೆ ಹಲವು ರಾಜಕಾರಣಿಗಳು ಮಾತನಾಡಿದ್ದಾರೆ.

ಈ ಬಗ್ಗೆ ವ್ಯಂಗ್ಯವಾಡಿರುವ ಓಮರ್ ಅಬ್ದುಲ್ಲಾ, ಭಾರತದಲ್ಲಿ ಈಗ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿಲ್ಲ. ಈಗ ಮುಸ್ಲಿಂಮರ ವಿರುದ್ಧ ದ್ವೇಷ ಸಾಧಿಸುವುದೇ ಹೆಚ್ಚಾಗಿದೆ. ಮೊದಲಿನ ರೀತಿ ಹಬ್ಬ ಹರಿದಿನಗಳನ್ನೆಲ್ಲ ಕೂಡಿ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಓಮರ್, ಮಂಡ್ಯ ಜಿಲ್ಲೆಯ ಕಾಲೇಜೊಂದರ ವೀಡಿಯೋವನ್ನ ಅಪ್ಲೋಡ್ ಮಾಡಿದ್ದಾರೆ. ಮತ್ತು ಆ ಬಗ್ಗೆ ಬರೆದಿದ್ದಾರೆ.

 ಈ ಪುರುಷರು ಎಷ್ಟು ಧೈರ್ಯಶಾಲಿಗಳು. ಮತ್ತು ಒಬ್ಬಂಟಿ ಹೆಣ್ಣನ್ನ  ಗುರಿಯಾಗಿಸಿದ ಇವರ ಪುರುಷತ್ವ ಎದ್ದು ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಮಂಡ್ಯ ಕಾಲೇಜಿನಲ್ಲಿ ಯುವತಿಯೊಬ್ಬಳು ಬುರ್ಖಾ ಹಾಕಿಕೊಂಡು ಬರುತ್ತಿದ್ದು, ಆಕೆಯ ವಿರುದ್ಧ ಕೇಸರಿ ಶಾಲು ಧರಿಸಿದ ಹುಡುಗರ ಹಿಂಡು ಜೈ ಶ್ರೀರಾಮ್ ಎಂದು ಜೈಕಾರ ಹಾಕಿಕೊಂಡು ಬರುತ್ತಿತ್ತು. ಮತ್ತು ಆ ಯುವತಿ ಅಲ್ಲಾಹು ಅಕ್ಬರ್ ಎಂದು ಹೇಳುತ್ತಿದ್ದಳು.

- Advertisement -

Latest Posts

Don't Miss