ನಾವು ಮಗಳ ವಯಸ್ಸಿನ ಯುವತಿಯನ್ನ ಮದುವೆಯಾದ ವರ ಎಂದು ಹಲವು ಸುದ್ದಿಗಳನ್ನ ಕೇಳೀರ್ತಿವಿ. ಇಂದೂ ಕೂಡ ಇಂಥದ್ದೇ ಸುದ್ದಿ ಹೊರಬಿದ್ದಿದೆ. ಆದ್ರೆ ಇದು ಯಾರೋ ಸಾಮಾನ್ಯ ವ್ಯಕ್ತಿಯ ಮದುವೆಯ ವಿಷಯವಲ್ಲ. ಬದಲಾಗಿ ಪಾಕ್ ಸಂಸದನ ಮದುವೆ ವಿಷಯ. 56 ವರ್ಷದ ಪಾಕ್ ಸಂಸದ ಅಮೀರ್ ಲಿಯಾಕತ್ ಹುಸೇನ್, 18ರ ಯುವತಿಯನ್ನ ವಿವಾಹವಾಗಿದ್ದಾರೆ.
ಅಮೀರ್‌ಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇದು ಮೂರನೇ ಮದುವೆಯಾಗಿದೆ. ವಿಚಿತ್ರ ಸಂಗತಿ ಅಂದ್ರೆ ಅಮೀರ್ ಎರಡನೇ ಪತ್ನಿಗೆ ನಿನ್ನೆ ತಾನೇ ತಲಾಖ್ ಕೊಟ್ಟಿದ್ದಾರೆ. ಡಿವೋರ್ಸ್ ಕೊಟ್ಟ 24 ಗಂಟೆಯಲ್ಲೇ ಮೂರನೇ ಮದುವೆಯಾಗುವಷ್ಟು ಅರ್ಜೆಂಟ್ ಈ ಮನುಷ್ಯನಿಗೆ. ಇನ್ನು ಮೂರನೇ ಮದುವೆ ಸಂಭ್ರಮದಲ್ಲಿರುವ ಸಂಸದನಿಗೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಭಿನಂದಿಸಿದ್ದಾರೆ.
ಇನ್ನು ಈತ ಮಗಳ ವಯಸ್ಸಿನ ಯುವತಿಯೊಂದಿಗೆ ವಿವಾಹವಾದ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಈತನ ಮಗಳ ಹೆಸರನ್ನ ಟ್ಯಾಗ್ ಮಾಡಿ, ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಆಕ್ರೋಶ ವ್ಯಕ್ತಪಡಿಸಿದ ಸಂಸದರ ಮಗಳು, ನೀವು ನನ್ನ ಕಲೆಯನ್ನು ಗೌರವಿಸುವುದಿದ್ದರೆ ಮಾತ್ರ ನನ್ನನ್ನು ಫಾಲೋ ಮಾಡಿ. ಇಲ್ಲವಾದಲ್ಲಿ ಮುಕ್ತವಾಗಿ ನನ್ನನ್ನು ನೀವು ಅನ್‌ಫಾಲೋ ಮಾಡಬಹುದು. ನಿಮ್ಮ ಕಾಮೆಂಟ್ಸ್ , ಮೆಸೇಜ್‌ಗಳಿಗೆಲ್ಲ ನಾನು ರಿಪ್ಲೈ ಮಾಡುವುದಿಲ್ಲವೆಂದು ಹೇಳಿದ್ದಾರೆ.