Saturday, July 12, 2025

Latest Posts

Raichur : ಮಾದರಿಯಾದ ವಸತಿ ನಿಲಯದ‌ ಮೇಲ್ವಿಚಾರಕಿ ರಜಿಯಾ ಸುಲ್ತಾನ್..!

- Advertisement -

ರಾಯಚೂರು : ಚೆಂಡು, ದಾಸವಾಳ, ಸೇವಂತಿ,ಹಾಗೂ ಗುಲಾಬಿ ಹೂಗಳ ಪರಿಮಳ. ಮತ್ತೊಂದೆಡೆ ಮೆಂತ್ಯೆ, ಪಾಲಕ್, ಕೊತ್ತಂಬರಿ ಸುವಾಸನೆ. ಮೆಣಸಿನಕಾಯಿ, ಟೊಮ್ಯೋಟೋ ಬೀನ್ಸ್ ನ ಸಂಗಮ.  ಇಲ್ಲಿ ಬೆಂಡೇಕಾಯಿ, ಈರೇಕಾಯಿ ಚೌಳೇಕಾಯಿ‌ ಸಸಿಗಳನ್ನ ನೋಡುವುದೇ ಒಂದು ಸೊಗಸು. ಅಷ್ಟಕ್ಕೂ ಇದೆಲ್ಲ ಇರೋದು ಎಲ್ಲಿ ಅಂತೀರ ಈ ಸ್ಟೋರಿ ನೋಡಿ. ಹೌದು ಇದೆಲ್ಲ ನಿಮಗೆ ಕಂಡು ಬರೋದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ (Manvi town in Raichur district) ಆರ್.ಜಿ.ಕ್ಯಾಂಪ್ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕೀಯರ ವಸತಿ (Metric East Girls Hostel) ನಿಲಯದಲ್ಲಿ. ವಸತಿ ನಿಲಯದ‌ ಮೇಲ್ವಿಚಾರಕಿ ರಜಿಯಾ ಸುಲ್ತಾನ್ (Razia Sultan) ಅವರ ಆಸಕ್ತಿ ಹಾಗೂ ಶ್ರಮದ ಫಲ ಹಾಗೂ ಸಿಬ್ಬಂದಿ ,ವಿದ್ಯಾರ್ಥಿನಿಯರ ಸಹಕಾರದಿಂದಾಗಿ ವಸತಿ ನಿಲಯದ‌ ಇಡೀ ಆವರಣ ಇಂದು ಹಸಿರಿನಿಂದ‌ ಕಂಗೊಳಿಸುತ್ತಿದೆ. ಅಂದಾಜು ೧೮ ತಳಿಯ ಗುಲಾಬಿ ಹೂಗಳು, ಹಾಗೂ ನಿತ್ಯ ಊಟಕ್ಕೆ ಬೇಕಾದ ತರಕಾರಿ, ಆಕರ್ಷಕ ಹೂಗಳನ್ನು ಬೆಳೆಯುವ ಮೂಲಕ ಮೇಲ್ವಿಚಾರಕಿ ರಜಿಯಾ ಸುಲ್ತಾನ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ ಇದೆಲ್ಲವನ್ನೂ ಇವರು‌ ಮಾಡ್ತಿರೋದು ಸ್ವಂತ ಖರ್ಚಿನಿಂದ. ಎಸ್, ಮೊದ ಮೊದಲು ಇಲ್ಲಿ ಕಟ್ಟಡ ಬಿಟ್ಟರೆ ಬೇರೆ ಯಾವ ಸೌಕರ್ಯಗಳೂ ಇರಲಿಲ್ಲ. ಹಾವು ಚೇಳುಗಳಿದ್ದುದ್ದರಿಂದ ವಿದ್ಯಾರ್ಥಿನಿಯರು ಭಯ ಪಡುತ್ತಿದ್ರು. ಆದರೆ ಇಂದು ಅಂತಹ ನಿಲಯವನ್ನು ರಜಿಯಾ ಸುಲ್ತಾನ್ ತಮ್ಮ‌ಸ್ವಂತ ಹಣದಲ್ಲೇ‌ ಅಭಿವೃದ್ಧಿ ಪಡಿಸಿದ್ದಾರೆ. ತರಕಾರಿ ಬೀಜ ಖರೀದಿ, ಗೋಡೆ ಬರಹ, 20 ಕ್ಕೂ ಹೆಚ್ಚು‌ಮಹಾತ್ಮರ ಭಾವಚಿತ್ರ (Portrait of Mahatma), ಸೇರಿದಂತೆ ಹೂಗಳ ರಕ್ಷಣೆಗಾಗಿ ಸುತ್ತಲೂ ಗೋಡೆ‌ ನಿರ್ಮಿಸಿದ್ದಾರೆ. ಹೀಗಾಗಿ ಮೇಲ್ವಿಚಾರಕಿ ರಹಿಯಾ ಸುಲ್ತಾನರ ಕಾಳಜಿ, ಮತ್ತು ಶಿಕ್ಷಣ ಪ್ರೇಮ ಮೆಚ್ಚುವಂತದ್ದು ಅಂತಾರೆ ಸ್ಥಳೀಯರು. ಅಷ್ಟೇ ಅಲ್ಲ ವಸತಿ ನಿಲಯದಲ್ಲಿ ಯೋಗ, ಪ್ರಾರ್ಥನೆಗೆ ಇವರು ಪ್ರಥಮ‌ ಆದ್ಯತೆ‌ ನೀಡಿದ್ದಾರೆ. ಒಟ್ಟಿನಲ್ಲಿ ರಜಿಯಾ ಸುಲ್ತಾನರಂತ ಮೇಲ್ವಿಚಾರಕಿಯರು ಎಲ್ಲಾ ವಸತಿ ನಿಲಯಕ್ಕೂ ದೊರೆತರೆ ಅದು ವಿದ್ಯಾರ್ಥಿಗಳನ ಪುಣ್ಯ ಅಂದ್ರೆ‌ ತಪ್ಪಾಗಲಾರದು.

                                                                      ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು.

- Advertisement -

Latest Posts

Don't Miss