ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮದೇ ಆದ ಆ್ಯಪ್ ಹೊರತರಲು ಚಿಂತಿಸಿದ್ದಾರೆ. ಇದೇ ಸೋಮವಾರದಂದು ಈ ಆ್ಯಪ್ ಬಿಡುಗಡೆಗೊಳ್ಳಲಿದೆ. ಇನ್ನು ಆ್ಯಪ್ ಹೆಸರು, ಟ್ರುತ್ ಸೋಶಿಯಲ್. ಈ ಬಗ್ಗೆ ಟ್ರಂಪ್ ಟ್ವೀಟ್ ಮಾಡಿದ್ದು, ನಿಮ್ಮ ನೆಚ್ಚಿನ ಅಧ್ಯಕ್ಷರು, ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ, ತಯಾರಾಗಿರಿ ಎಂದು ಹೇಳಿದ್ದಾರೆ.
ಅಮೆರಿಕದ ಕ್ಯಾಪಿಟಲ್ ಕಟ್ಟಡದ ದಾಳಿಯ ಬಳಿಕ, ಟ್ರಂಪ್ ಸಾಮಾಜಿಕ ಜಾಲತಾಣವನ್ನ ಬಳಸುವುದನ್ನ ನಿಷೇಧಿಸಲಾಗಿತ್ತು. ಟ್ವಿಟರ್, ಫೇಸ್‌ಬುಕ್ ಬಳಕೆ ಮಾಡಲು, ಟ್ರಂಪ್‌ಗೆ ನಿಷೇಧವಿತ್ತು. ಈ ಕಾರಣಕ್ಕೆ ಟ್ರಂಪ್ ತಮ್ಮದೇ ಆದ ಹೊಸ ಆ್ಯಪ್ ತಯಾರಿಸುವುದಕ್ಕೆ ಮುಂದಾಗಿದ್ದರು. ಈ ಕಾರಣಕ್ಕೆ ನಾಳೆ ಟ್ರುತ್ ಸೋಶಿಯಲ್ ಆ್ಯಪ್ ರಿಲೀಸ್ ಮಾಡಲು ಟ್ರಂಪ್ ನಿರ್ಧರಿಸಿದ್ದಾರೆ.
ಇನ್ನು ಈ ಆ್ಯಪ್‌ನ ವಿಶೇಷತೆಗಳೇನು ಅಂತಾ ನೋಡೋದಾದ್ರೆ, ಇಲ್ಲಿ ಜನರ ಮಾತುಗಳನ್ನ ಪ್ರಸ್ತುತಪಡಿಸಲು ಅವಕಾಶವಿದೆಯಂತೆ. ವಿಶೇಷ ಸಂಗತಿ ಅಂದ್ರೆ ಈ ಆ್ಯಪ್ ಲಾಂಚ್ ಆಗುವ ಮೊದಲೇ 175 ಫಾಲೋವರ್ಸನ್ನ ಹೊಂದಿದೆ. ಇದನ್ನ ಬರೀ ಅಮೆರಿಕನ್ನರಷ್ಟೇ ಬಳಸಬಹುದು ಅಂತಾ ಸುದ್ದಿ ಇದ್ದು, ಈ ಆ್ಯಪ್ ಭಾರತೀಯರು ಡೌನ್‌ಲೋಡ್ ಮಾಡಿಕೊಳ್ಳೋಕ್ಕಾಗಲ್ಲಾ ಅಂತಾನೂ ಹೇಳಲಾಗ್ತಿದೆ.
ಸದ್ಯ ಅಮೆರಿಕದಲ್ಲಿ ಜನ ಟ್ವಿಟರ್ ಮತ್ತು ಫೇಸ್‌ಬುಕ್ ಬಳಕೆ ಕಡಿಮೆ ಮಾಡಿ, ಹೊಸ ಹೊಸ ಆ್ಯಪ್‌ಗಳ ಬಳಕೆಗೆ ಮುಂದಾಗಿದ್ದಾರೆ. ಇಂಥ ಸಂದರ್ಭದಲ್ಲಿ ಟ್ರಂಪ್ ಆ್ಯಪ್ ಕೂಡಾ ಯಶಸ್ಸು ಗಳಿಸತ್ತಾ ಅಂತಾ ಕಾದು ನೋಡಬೇಕಿದೆ. ಟ್ರಂಪ್ ಮುಂದಿನ ಚುನಾವಣೆಗಾಗಿ, ಜನರ ಮನದ ಮಾತು ಆಲಿಸಲು ಆ್ಯಪ್ ಮೂಲಕ ಸಿದ್ಧತೆ ನಡೆಸುತ್ತಿದ್ದಾರೆ ಅಂತಾನೂ ಗುಸು ಗುಸು ಇದೆ.

