ಬೇಸಿಗೆ ಗಾಲ ಹತ್ತಿರ ಬರುತ್ತಿದೆ. ಈಗ ಮಾವು ಮತ್ತು ಹಲಸಿನ ಹಣ್ಣು ತಿನ್ನುವ ಸಮಯ. ಹಲವರು ಯಾವಾಗ ಇವೆರಡು ಹಣ್ಣನ್ನು ತಿನ್ನುತ್ತೇವೋ ಎಂದು ಕಾಯುತ್ತಲಿರುತ್ತಾರೆ. ಹೆಣ್ಣು ಮಕ್ಕಳಂತೂ, ಈ ಹಣ್ಣುಗಳಿಂದ ವೆರೈಟಿ ವೆರೈಟಿ ತಿಂಡಿಯನ್ನ ಯಾವಾಗ ತಯಾರಿಸಿ ತಿಂತಿವೋ ಅಂತಾ ಕಾಯ್ತಿರ್ತಾರೆ. ಆದ್ರೆ ಲಂಡನ್‌ನಲ್ಲಿ ಈ ಹಣ್ಣಿನ ಬೆಲೆ ಕೇಳಿದ, ಅಲ್ಲಿನ ಹಲಸು ಪ್ರಿಯರಿಗೆ ಶಾಕ್ ಆಗೋದಂತೂ ಗ್ಯಾರಂಟಿ. ಯಾಕಂದ್ರೆ ಲಂಡನ್‌ನಲ್ಲಿ ಒಂದು ಹಲಸಿನ ಬೆಲೆ, ಚಿನ್ನದ ಬೆಲೆಗೆ ಸಮವಾಗಿದೆ.
ಅಲ್ಲಿ ಒಂದು ಹಲಸಿನ ಹಣ್ಣಿನ ಬೆಲೆ 16 ಸಾವಿರ ರೂಪಾಯಿ. ಹೌದು ರಿಕಾರ್ಡೋ ಸೆನ್ರಾ ಎಂಬ ಲಂಡನ್ ಪ್ರಜೆ, ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಫೋಟೊವೊಂದನ್ನ ಹಂಚಿಕೊಂಡಿದ್ದಾರೆ. ಆ ಫೊಟೋದಲ್ಲಿ ಹಲಸಿನ ಹಣ್ಣಿನ ಬೆಲೆ 16 ಸಾವಿರ ರೂಪಾಯಿ ಎಂದು ಬರೆದಿದೆ. ಅಲ್ಲದೇ ಈ ಬಗ್ಗೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದು, ಇಲ್ಲಿನ ಜನ ಲಂಡನ್‌ಗೆ ಹೋಗಿ ಹಲಸಿನ ಹಮ್ಣು ಮಾರಿದ್ರೆ, ಕೋಟ್ಯಾಧೀಶ್ವರನಾಗೋದು ಗ್ಯಾರಂಟಿ ಎಂದು ಬರೆದಿದ್ದಾರೆ.
ಇನ್ನು ವಿಷಯ ಏನಂದ್ರೆ, ಲಂಡನ್‌ನಲ್ಲಿ ಹಲಸಿನ ಹಣ್ಣಿಗೆ ಇಷ್ಟೆಲ್ಲ ಬೆಲೆ ಇರುವುದಿಲ್ಲ. ಆದ್ರೆ ಇಂದಿನ ಬೆಲೆ ಮಾತ್ರ ಅಚ್ಚರಿ ಪಡಿಸುವಂತಿತ್ತು ಅಂತಾ ಇಲ್ಲಿನ ಪ್ರಜೆಗಳು ಹೇಳುತ್ತಾರೆ. ಸಾಮಾನ್ಯವಾಗಿ ಹಲಸಿನ ಹಣ್ಣಿನ ಬೆಲೆ 80ರಿಂದ 90 ರೂಪಾಯಿವರೆಗೆ ಇರುತ್ತದೆ. ಆದ್ರೆ ಇಂದು ಮಾತ್ರ ಹೀಗೆ ಶಾಕಿಂಗ್ ಬೆಲೆ ಹಾಕಲಾಗಿದೆಯಂತೆ. ಇಲ್ಲಿ ಹಲಸಿನ ಹಣ್ಣನ್ನು ಬೆಳೆಯಲಾಗುವುದಿಲ್ಲ. ಹಾಗಾಗಿ ಈ ಹಣ್ಣಿಗೆ ಬೇಡಿಕೆ ಹೆಚ್ಚು.