ಉತ್ತರಪ್ರದೇಶದ (Uttar Pradesh) ವಿಧಾನಸಭಾ ಚುನಾವಣೆಯಲ್ಲಿ (Assembly elections) ಬಿಎಸ್‌ಪಿ (BSP) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹಾಗೂ ಬಿಎಸ್‌ಪಿಯನ್ನು ಬಿಜೆಪಿಯ ಬಿ ಟೀಂ (BJP’s B Team) ಎಂದು ಸಮಾಜವಾದಿ ಪಕ್ಷ (Socialist Party) ಆರೋಪಿಸಿತ್ತು. ಈಗ ಇದರ ಬಗ್ಗೆ ಮಾತನಾಡಿರುವ ಮಾಯಾವತಿ (Mayawati) ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾಗಿಯೂ ನಮ್ಮ ಪಕ್ಷ ಬಿಜೆಪಿ ಬಿ ಟೀಂ ಆಗಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ನಮ್ಮ ಜೊತೆ ಏಕೆ ಮೈತ್ರಿ ಮಾಡಿಕೊಂಡಿದೆ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿ ಇನ್ನೂ ಪ್ರಸ್ತುತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಯಾವತಿ ಅವರು, ಸತ್ಯವನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ಅಮಿತ್ ಶಾ (Amit Shah) ತೋರಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಇರುವಂತೆ, ನಾನು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷೆ. ‘ಅತ್ಯಾಚಾರ, ಹಲ್ಲೆಗೆ ಗುರಿಯಾದ ದಲಿತರ ಮನೆಗೆ ಮಾಯಾವತಿ ಭೇಟಿ ನೀಡಿಲ್ಲ ಎಂದು ಈ ಮಾಧ್ಯಮಗಳು ಕೇಳುತ್ತಿವೆ. ಪ್ರಿಯಾಂಕಾ ಗಾಂಧಿಯಂತೆ (Priyanka Gandhi) ಸಂತ್ರಸ್ತರ ಮನೆಗೆ ಹೋಗಿ, ನಾಟಕವಾಡಲು ನಾನು ಯಾವುದೇ ಪಕ್ಷದ ಉಸ್ತುವಾರಿ ಅಥವಾ ಪ್ರಧಾನ ಕಾರ್ಯದರ್ಶಿ ಅಲ್ಲ. ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಮಾಯಾವತಿ ಅವರು, ಬಿಎಸ್‌ಪಿ ಮುಖ್ಯಸ್ಥರು ಬೆಳಗ್ಗೆ 7 ಗಂಟೆಗೆ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದೂ ಹೇಳಲಾಗಿದೆ.