Monday, December 23, 2024

Latest Posts

ಪರಮ ಶಿವನ 19 ಅವತಾರಗಳ ಬಗ್ಗೆ ಪುಟ್ಟ ಮಾಹಿತಿ- ಭಾಗ 3

- Advertisement -

ನಾವು ಭಾಗ ಒಂದು ಮತ್ತು ಎರಡರಲ್ಲಿ ಶಿವನ 19 ಅವತಾರದಲ್ಲಿ 8 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂಭತ್ತನೇಯದಾಗಿ ಹನುಮಾನ್ ಅವತಾರ. ಶಿವನ ಅವತಾರಗಳಲ್ಲೇ ಸರ್ವ ಶ್ರೇಷ್ಠವಾದ ಅವತಾರವೇ ಹನುಮಾನ್ ಅವತಾರ. ಸಮುದ್ರ ಮಂಥನದ ಸಮಯದಲ್ಲಿ ಸಪ್ತಋಷಿಗಳು ಶಿವನ ವೀರ್ಯವನ್ನು ಎಲೆಯಲ್ಲಿ ಸಂಗ್ರಹಿಸಿದರು.  ಅಂಜನಿಗೆ ಸಂತಾನವಿಲ್ಲದ ಕಾರಣ, ಆಕೆ ಶಿವನಲ್ಲಿ ಪುತ್ರ ಸಂತಾನಕ್ಕಾಗಿ ಬೇಡಿಕೊಂಡಿದ್ದಳು. ಆ ವೇಳೆ ಸಪ್ತರ್ಷಿಗಳು ಅಂಜನಿಯ ಕಿವಿಯ ಮೂಲಕ ಆ ವೀರ್ಯವನ್ನು ಆಕೆಯ ದೇಹ ಸೇರುವಂತೆ ಮಾಡಿದರು. ಹೀಗೆ ಶಿವನ ಅಂಶವಾದ ಹನುಮಂತ ಜನಿಸಿದ.

ಹತ್ತನೇಯದಾಗಿ ವೃಷಭಾವತಾರ. ದೈತ್ಯರನ್ನು ನಾಶ ಮಾಡಲು ವಿಷ್ಣು ಪಾತಾಳ ಲೋಕಕ್ಕೆ ಹೋಗಿದ್ದಾಗ, ಅಲ್ಲಿ ಬಬಹಳಷ್ಟು ಚಂದ್ರಮುಖಿಯನ್ನ ಕಂಡು ಮನಸೋತ ವಿಷ್ಣು, ಅವರೆಲ್ಲರೊಂದಿಗೂ ಸರಸ ಸಲ್ಲಾಪ ಮಾಡಿ, ಪುತ್ರ ಪ್ರಾಪ್ತಿಸಿದ. ಆ ಪುತ್ರರೆಲ್ಲ ಭೂಲೋಕದಲ್ಲಿ ಸಂಕಷ್ಟ ತಂದಿಟ್ಟರು. ಹಾಗಾಗಿ ಶಿವ ಅವರನ್ನೆಲ್ಲ ನಾಶ ಮಾಡಲು ವೃಷಭದ ಅವಾತರ ತಾಳಿದರು.

ಹನ್ನೊಂದನೇಯದು ಯತಿನಾಥನ ಅವತಾರ. ನಳ ದಮಯಂತಿಯ ಜನ್ಮ ತಾಳಲು ಕಾರಣನಾದವನೇ ಯತಿನಾಥ. , ಶಿವ ಯತಿನಾಥನೆಂಬ ರೂಪ ತಾಳಿ, ಅಹುಕನೆಂಬ ಶಿವಭಕ್ತನ ಗುಡಿಸಿಲಿಗೆ ಹೋದ. ಗುಡಿಸಲು ಚಿಕ್ಕದಿದ್ದ ಕಾರಣ, ಯತಿನಾಥನನ್ನು ಒಳಗಡೆ ಮಲಗಿಸಿ, ಪತಿ ಪತ್ನಿ ಹೊರಗಡೆ ಮಲಗಿದರು. ಕಾಡುಮೃತ ಅಹುಕನ್ನು ಕೊಂದಿತು. ಹಾಗಾಗಿ ಪತ್ನಿ ಕೂಡ ಪ್ರಾಣ ತ್ಯಾಗಕ್ಕಾಗಿ ನಿರ್ಧರಿಸಿದಳು. ಆಗ ಯತಿನಾಥ ನಿಜರೂಪ ತಾಳಿ, ನೀವು ಮುಂದಿನ ಜನ್ಮದಲ್ಲಿ ನಳ ದಮಯಂತಿಯಾಗಿ ಜನಿಸಿ ಎಂದು ವರ ನೀಡಿದನು.

ಹನ್ನೆರಡನೇಯದಾಗಿ ಕೃಷ್ಣ ದರ್ಶನ ಅವತಾರ. ಇಕ್ಷ್ವಾಕು ವಂಶದಲ್ಲಿ ರಾಜ ನಭಕನ ಜನ್ಮವಾಯಿತು. ಅವರು ತಮ್ಮ ಶಿಕ್ಷಣಕ್ಕಾಗಿ ಗುರುಕುಲಕ್ಕೆ ತೆರಳಿದರು. ಅವರು ಮರಳಿ ಬರುವುದರೊಳಗೆ ಅವರ ಸಹೋದರರು, ರಾಜ್ಯವನ್ನು ಹಂಚಿಕೊಂಡರು. ಆಗ ಅವರು ಅಂಗೀರಸ ಋಷಿಯ ಯಜ್ಞ ಪೂರ್ಣಗೊಳಿಸಲು ಸಹಾಯ ಮಾಡಿದರು. ಹಾಗಾಗಿ ನಭಾಗನಿಗೆ ಮುನಿಗಳು ತಮ್ಮ ಸಂಪತ್ತಲ್ಲಿ ಕೆಲ ಭಾಗ ನೀಡಲು ನಿರ್ಧರಿಸಿದರು. ಆದರೆ ಪ್ರತ್ಯಕ್ಷನಾದ ಕೃಷ್ಣ ದರ್ಶನ, ಸಂಪತ್ತು ನೀಡುವುದನ್ನು ತಡೆದು, ಮೋಕ್ಷದ ಬಗ್ಗೆ ಅರಿವು ಮೂಡಿಸಿದರು.  

ಉಳಿದ ಅವತಾರಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.

- Advertisement -

Latest Posts

Don't Miss