ನಾವು ನೀವೆಲ್ಲ ಬೇಸಿಗೆ ಬಂತಂದ್ರೆ, ಪ್ರಾಣಿ, ಪಕ್ಷಿಗಳಿಗೆ ನೀರುಣಿಸಬೇಕು ಅನ್ನೋ ಸಂದೇಶ ನೀಡುವವರ ವೀಡಿಯೋಗಳನ್ನ ನೋಡಿರ್ತೀವಿ. ಅಂತೆಯೇ ನಾವು ಕೂಡ ಪ್ರಾಣಿ, ಪಕ್ಷಿಗಳಿಗಾಗಿ ಟೆರೆಸ್ ಮೇಲೆ ನೀರನ್ನೂ ಇಡ್ತೀವಿ. ಆದ್ರೆ ಓರ್ವ ವ್ಯಕ್ತಿ, ಹಾವಿಗೆ ಬಾಯಾರಿಕೆಯಾಗಿದೆ ಎಂದು ಕೈಯಲ್ಲಿ ನೀರು ಹಿಡಿದು, ಕುಡಿಸಿದ್ದಾರೆ. ಅವರ ಧೈರ್ಯದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಸರಿಸೃಪಗಳು ವಿಷಪೂರಿತವಾಗಿದ್ದರೂ, ಹಾವಿನಷ್ಟು ವಿಷಪೂರಿತ ಬೇರೊಂದಿಲ್ಲ. ಹಾಗಾಗಿಯೇ ಜನ ಹಾವೆಂದರೆ ದೂರ ಓಡೋದು. ಹಾಗಂತ ಎಲ್ಲ ಹಾವುಗಳೂ ಕಚ್ಚೋದಿಲ್ಲಾ. ಆದ್ರೂ ಹಾವನ್ನ ಕಂಡರೆ ಭಯ. ಆದ್ರೆ ಭಾರತೀಯ ಅರಣ್ಯ ಇಲಾಖೆ ಅಧಿಕಾರಿಯಾಗಿರುವ ಸುಶಾಂತ್ ನಂದಾ ಕೈಯಲ್ಲಿ ಹಾವನ್ನು ಹಿಡಿದುಕೊಂಡು, ನೀರು ಕುಡಿಸಿದ್ದಾರೆ. ಈ ವೀಡಿಯೋವನ್ನ ಅವರು ತಮ್ಮ ಟ್ವೀಟರ್‌ನಲ್ಲಿ ಅಪ್ಲೋಡ್ ಮಾಡಿದ್ದು, ಬೇಸಿಗೆ ಸಮೀಪಿಸುತ್ತಿದೆ. ನೀವಿಡುವ ನಾಲ್ಕು ಹನಿ ನೀರು, ಬೇರೆಯವರ ಜೀವ ಉಳಿಸಬಹುದು. ನಿಮ್ಮ ಮನೆಯ ಅಂಗಳದಲ್ಲಿ ಪ್ರಾಣಿ, ಪಕ್ಷಿಗಳಿಗಾಗಿ ನೀರು ಇಡಿ ಎಂದು ಮನವಿ ಮಾಡಿದ್ದಾರೆ.
ಈ ವೀಡಿಯೋ ಬಗ್ಗೆ ತರಹೇವಾರಿ ಕಾಮೆಂಟ್ ಬಂದಿದೆ. ಕೆಲವರು ಇವರ ಕೆಲಸಕ್ಕೆ ಶಹಭಾಷ್ ಎಂದರೆ, ಇನ್ನು ಕೆಲವರು ಹೆದರಿಕೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಹಾವು ಯಾವ ಜಾತಿಯದ್ದು ಅನ್ನೋ ಬಗ್ಗೆ ಚರ್ಚೆ ಮಾಡಿದ್ದಾರೆ.