ಮೊನ್ನೆ ತಾನೇ ನಾವು ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೋ ಒಂದರ ಬಗ್ಗೆ ಲೇಖನ ಬರೆದಿದ್ದೆವು. ಅದರಲ್ಲಿ ಸುಶಾಂತ್ ನಂದಾ ಹಸಿರು ಹಾವಿನ್ನು ಕೈಯಲ್ಲಿ ಹಿಡಿದು ನೀರು ಕುಡಿಸುತ್ತಿದ್ದರು. ಮತ್ತು ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀವೂ ನೀರು ನೀಡಿ ಎಂದು ಸಂದೇಶ ನೀಡಿದ್ದರು. ಆದ್ರೆ ಇದರೊಂದಿಗೆ ನಾವು ಶೀರ್ಷಿಕೆಯಲ್ಲೇ ನೀವು ಈ ರೀತಿ ಎಂದಿಗೂ ಪ್ರಯತ್ನಿಸಬೇಡಿ ಎಂದು ಹೇಳಿದ್ದೆವು. ಯಾಕಂದ್ರೆ ಪ್ರಾಣಿಯನ್ನ ಪಳಗಿಸಿದವರಿಗೆ ಮಾತ್ರ, ಈ ರೀತಿಯ ಗಿಮಿಕ್ ಗೊತ್ತಿರುತ್ತದೆ. ಸಾಮಾನ್ಯ ಜನ ಈ ರೀತಿ ಮಾಡಿದರೆ, ಅಪಾಯ ಕಟ್ಟಿಟ್ಟ ಬುತ್ತಿ.
ಇಂಥ ಅಪಾಯವನ್ನ ಶಿರಸಿಯ ಯುವಕನೊಬ್ಬ ತಂದುಕೊಂಡಿದ್ದಾನೆ. ಮಾಜ್ ಸಯೀದ್ ಎಂಬಾತ, 3 ಹಾವುಗಳೊಂದಿಗೆ ಆಟವಾಡುತ್ತಿದ್ದು, ತಾನೂ ಕುಳಿತು ಕಾಲನ್ನ ಆಡಿಸುತ್ತಿದ್ದ. ಆ ಮೂರು ಹಾವುಗಳಲ್ಲಿ ಒಂದು ಹಾವು ಅವನ ಕಾಲುಗಳನ್ನೇ ಗಮನಿಸುತ್ತಿದ್ದು, ಆತನ ಕಾಲಿಗೆ ಕಚ್ಚಿದೆ. ಸ್ಥಳೀಯ ಆಸ್ಪತ್ರೆಗೆ ಆತನನ್ನು ದಾಖಲಿಸಿ, ಚಿಕಿತ್ಸೆ ನೀಡಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಈತ ಹಾವಿನೊಂದಿಗೆ ಆಟವಾಡಿದ್ದನ್ನ ಇನ್ನೊಬ್ಬರು ವೀಡಿಯೋ ಮಾಡಿದ್ದಾರೆ. ಈ ವೀಡಿಯೋವನ್ನ ಅರಣ್ಯಾಧಿಕಾರಿ ಸುಸಾಂತ್ ನಂದಾ ಕೂಡ ಶೇರ್ ಮಾಡಿಕೊಂಡಿದ್ದು, ಇದು ನಾಗರಹಾವನ್ನ ಆಡಿಸುವ ಭಯಾನಕ ರೀತಿ. ಹಾವು ನಮ್ಮ ಚಲನವಲನಗಳನ್ನು ಗಮನಿಸುತ್ತದೆ. ಮತ್ತು ಅದನ್ನೇ ಬೆದರಿಕೆ ಎಂದು ತಿಳಿದು ಅಟ್ಯಾಕ್ ಮಾಡುತ್ತದೆ ಎಂದು ಹೇಳಿದ್ದಾರೆ.