ಬೆಂಗಳೂರು: ಸಚಿವ ಈಶ್ವರಪ್ಪ ಮೇಲಿನ ಲಂಚಕ್ಕೆ ಬೇಡಿಕೆ ಇಟ್ಟಂತ ಆರೋಪ ಸುಳ್ಳು. ಅವರ ಮೇಲಿನ ಆರೋಪ ಆಧಾರರಹಿತವಾಗಿದೆ. ಇದು ಕಾಂಗ್ರೆಸ್ ಪ್ರಚೋದನೆಯಿಂದ ಆಗಿರುವ ಕೆಲಸ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಸಚಿವ ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಕೆ.ಎಸ್. ಈಶ್ವರಪ್ಪ ವಿರುದ್ಧ ಲಂಚಕ್ಕೆ ಬೇಡಿಕೆ ಆರೋಪದ ಬಗ್ಗೆ, ಬೆಳಗಾವಿಯ ಗುತ್ತಿಗೆದಾರನಿಂದ ಪ್ರಧಾನಿ ಮೋದಿಗೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಚಿವ ಈಶ್ವರಪ್ಪ ಮೇಲಿನ ಆರೋಪ ಆಧಾರರಹಿತವಾಗಿದೆ. ಇದು ಕಾಂಗ್ರೆಸ್ ಅವರ ಪ್ರಚೋದನೆಯಿಂದ ಆಗಿರುವ ಕೆಲಸವಾಗಿದೆ ಎಂದರು.
ನಮ್ಮ ಸಚಿವರು ಮತ್ತು ಸರ್ಕಾರದ ಮೇಲೆ ಗೂಬೆ ಕುರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈಶ್ವರಪ್ಪ ಮೇಲಿನ ಆರೋಪ ಶುದ್ದ ಸುಳ್ಳು ಆಗಿದೆ. ಈಶ್ವರಪ್ಪ ತಮ್ಮ ಇಲಾಖೆಯ ಅನುದಾನವನ್ನ ಪಾರದರ್ಶಕತೆ ಯಿಂದ ಎಲ್ಲಾ 224 ಕ್ಷೇತ್ರಗಳಿಗೂ ನೀಡಿದ್ದಾರೆ. ಬರೀ ಬಿಜೆಪಿ ಇರುವ ಕ್ಷೇತ್ರಗಳಿಗೆ ಮಾತ್ರ ಕೊಟ್ಟಿಲ್ಲ. ಈಶ್ವರಪ್ಪ ಮೇಲಿನ ಆರೋಪವನ್ನ ನಾನು ಒಪ್ಪಲ್ಲ ಎಂದು ಸಚಿವ ಈಶ್ವರಪ್ಪ ಅವರನ್ನು ಸಮರ್ಥನೆ ಮಾಡಿಕೊಂಡರು.




