13 ರಾಷ್ಟ್ರೀಯ ಉಪಾಧ್ಯಕ್ಷರ ನೇಮಕ – 2029ಕ್ಕೆ ಸಜ್ಜಾದ ಬಿಜೆಪಿ ಪಡೆ!

2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಾರ್ಟಿ ದೊಡ್ಡ ಮಟ್ಟದ ತಂತ್ರ ಹೆಣೆದಿದೆ. ಎಸ್ ‘ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ‘ನಿತಿನ್ ನಬಿನ್’ ಅವರು ತಮ್ಮ ನೂತನ ಕೇಂದ್ರೀಯ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಪಕ್ಷದ ಸಂಘಟನೆಯಲ್ಲಿ ಭಾರಿ ಬದಲಾವಣೆಗಳನ್ನು ತಂದಿದ್ದಾರೆ!

ಅನುಭವಿ ನಾಯಕರು ಹಾಗೂ ಜನಪ್ರಿಯ ಮುಖಗಳ ಸಮತೋಲನದೊಂದಿಗೆ ರಚನೆಯಾಗಿರುವ ಈ ಹೊಸ ತಂಡದಲ್ಲಿ ಒಟ್ಟು 13 ಜನ ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು 16 ಮೋರ್ಚಾಗಳ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಎಸ್ ‘ಈ ಹೊಸ ತಂಡದಲ್ಲಿ ಕೆಲ ಪ್ರಮುಖ ದಿಗ್ಗಜರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ ಅಂತಾನೆ ಹೇಳಬಹುದು! ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ‘ವಸುಂಧರಾ ರಾಜೆ’ ಹಾಗೂ ಹಿರಿಯ ನಾಯಕ ‘ರಾಮ್ ಮಾಧವ್’ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಮಾಜಿ ಕೇಂದ್ರ ಸಚಿವೆ ‘ಸ್ಮೃತಿ ಇರಾನಿ’ ಅವರಿಗೆ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗಿದ್ದು, ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಇದರ ಜೊತೆಗೆ ‘ಕನ್ನಡಿಗರಿಗೂ ಅತ್ಯಂತ ಹೆಮ್ಮೆಯ ವಿಷಯ ಒಂದಿದೆ! ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಬಲ ತುಂಬಿರುವ ಬಿಜೆಪಿ, ಪ್ರೊ. ಎಂ. ನಾಗರಾಜ್ ಅವರಿಗೆ ಮಹತ್ವದ ಹುದ್ದೆ ನೀಡಿರೋದಾಗಿ ತಿಳಿದುಬಂದಿದೆ! ಹೌದು ನಾಗರಾಜ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಬಿ.ಎಲ್. ಸಂತೋಷ್ ಅವರಿಗೂ ಪ್ರಮುಖ ಸಂಘಟನಾತ್ಮಕ ಜವಾಬ್ದಾರಿಯನ್ನು ಮುಂದುವರಿಸಲಾಗಿದೆ.

ನಿತಿನ್ ನಬಿನ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡಿರುವ ಈ ಬೃಹತ್ ಪುನರ್‌ರಚನೆಯು, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಹೊಸ ಸಂಘಟನಾತ್ಮಕ ಶಕ್ತಿಯನ್ನು ತುಂಬುವ ಲೆಕ್ಕಾಚಾರದಲ್ಲಿದೆ ಅಂತ ಹೇಳಬಹುದು! ಮುಂಬರುವ ರಾಜಕೀಯ ಸವಾಲುಗಳನ್ನು ಎದುರಿಸಲು ಮತ್ತು ಪಕ್ಷವನ್ನು ಮತ್ತಷ್ಟು ಸಕ್ರಿಯವಾಗಿ ಮುನ್ನಡೆಸಲು ಈ ಹೊಸ ತಂಡಕ್ಕೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ. ಈ ರಾಜಕೀಯ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ..

About The Author