Thursday, April 17, 2025

Latest Posts

ಅನೂಜ್ ರಾವತ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂಬೈ ಉಡೀಸ್

- Advertisement -

ಪುಣೆ:15ನೇ ಆವೃತ್ತಿಯ ಐಪಿಎಲ್‍ನಲ್ಲಿ ಆರ್‍ಸಿಬಿ ಅತಿ ದೊಡ್ಡ ಗೆಲುವನ್ನು ಕಂಡಿದೆ. ಆರ್‍ಸಿಬಿ ಹಾಗೂ ಮುಂಬೈ ನಡುವಿನ ಕದನ ಹೈವೋಲ್ಟೇಜ್‍ನಿಂದ ಕೂಡಿತ್ತು.

ಪುಣೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆರ್‍ಸಿಬಿ ಮುಂಬೈ ಮೇಲೆ ಭರ್ಜರಿಯಾಗಿಯೇ ಸವಾರಿ ಮಾಡಿ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿತು.

ಬೌಲರ್‍ಗಳ ಸಾಂಘಿಕ ಹೋರಾಟದ ಫಲ ಹಾಗೂ ಓಪನರ್ ಅನೂಜ್ ರಾವತ್ ಅವರ ಸ್ಫೋಟಕ ಬ್ಯಾಟಿಂಗ್ ವಿರಾಟ್ ಕೊಹ್ಲಿ ಅವರ ಆಕರ್ಷಕ ಬ್ಯಾಟಿಂಗ್ ನೆರೆವಿನಿಂದ ಆರ್‍ಸಿಬಿ ಗೆಲುವಿನ ನಗೆ ಬೀರಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಸೂರ್ಯ ಕುಮಾರ್ 37 ಎಸೆತದಲ್ಲಿ 68 ರನ್ ಸಿಡಿಸಿ 150 ರನ್‍ಗಳ ಗಡಿ ದಾಟಿಸುವಲ್ಲಿ ನೆರವಾದರು.

ಗೆಲ್ಲಲು ಸಾಧಾರಣ ಮೊತ್ತ ಪಡೆದ ಆರ್‍ಸಿಬಿಗೆ ಆ ಪಿಚ್‍ನಲ್ಲಿ ರನ್ ಗಳಿಸುವುದು ಅಷ್ಟೆ ಕ್ಲಿಷ್ಟವೆನಿಸಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಅನೂಜ್ ರಾವತ್ ಮೊದಲ ವಿಕೆಟ್‍ಗೆ 50 ರನ್ ಸೇರಿಸಿದರು.

ಫಾಫ್ ಡುಪ್ಲೆಸಿಸ್ ನಂತರ ಅನೂಜ್ ರಾವತ್‍ಗೆ ವಿರಾಟ್ ಕೊಹ್ಲಿ ಒಳ್ಳೆಯ ಸಾಥ್ ಕೊಟ್ಟರು. ಸಿಕ್ಸರ್‍ಗಳ ಸುರಿಮಳೆಗೈದ ಅನೂಜ್ ರಾವತ್ 38 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಅನೂಜ್ ರಾವತ್ ಒಟ್ಟು 47 ಎಸೆತದಲ್ಲಿ 2 ಬೌಂಡರಿ 6 ಸಿಕ್ಸರ್ ಸೇರಿ ಒಟ್ಟು 66 ರನ್ ಚಚ್ಚಿದರು.

- Advertisement -

Latest Posts

Don't Miss