ಮುಂಬೈ:ಐಪಿಎಲ್‍ನ 21ನೇ ಪಂದ್ಯದಲ್ಲಿ ಇಂದು ಸನ್‍ರೈಸರ್ಸ್ ಹೈದ್ರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿದೆ.
ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ಸನ್‍ರೈರ್ಸ್ ಹೈದ್ರಾಬಾದ್ ತಂಡ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.
ಸನ್‍ರೈ¸ರ್ಸ್ ಹೈದ್ರಬಾದ್ ತಂಡ ಆಡಿದ ಮೂರು ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದು 2 ಪಂದ್ಯಗಳನ್ನು ಕೈಚೆಲ್ಲಿದೆ. ಮೊನ್ನೆ ಚೆನ್ನೈ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು ಇಂದು ಗುಜರಾತ್ ವಿರುದ್ಧ ಗೆದ್ದು ಗೆಲುವಿನ ಅಭಿಯಾನ ಮುಂದುವರೆಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಇತ್ತ ಸೋಲಿಲ್ಲದ ಸರದಾರನಂತೆ ಹೆಜ್ಜೆ ಗಳನ್ನಿಡುತ್ತಿರುವ ಗುಜರಾತ್ ಟೈಟಾನ್ಸ್ ಆಡಿದ ಮೂರು ಪಂದ್ಯಗಳನ್ನು ಗೆದ್ದು ಮುನ್ನುಗುತ್ತಿದೆ. ಮೊನ್ನೆ ಪಂಜಾಬ್ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕವಾಗಿ ಗೆದ್ದು ಟೈಟಾನ್ಸ್ ತನ್ನ ತಾಕತನ್ನು ಪ್ರದರ್ಶಿಸಿತ್ತು.
ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಬೇಕಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲವಾಣೆ ಮಾಡಿದೆ. ಮೊನ್ನೆ ಚೆನ್ನೈ ವಿರುದ್ಧ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ರಾಹುಲ್ ತ್ರಿಪಾಠಿ ಮೂರನೆ ಕ್ರಮಾಂಕದಲ್ಲಿ ಅಡಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿಕೊಲೊಸ್ ಪೂರಾನ್ ಹಾಗೂ ಏಡಿನ್ ಮಾರ್ಕ್‍ರಾಮ್ ಸಿಡಿಯಬೇಕಿದೆ. ಕೆಳಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಅಬ್ದುಲ್ ಸಾಮಾದ್ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಸ್ಕೋರ್ ಹೆಚ್ಚಿಸಬೇಕಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಗುಜರಾತ್ ಬ್ಯಾಟ್‍ರಗಳನ್ನ ಕಟ್ಟಿ ಹಾಕಬೇಕಿದೆ. ವೇಗಿ ನಟರಾಜನ್ ಹಾಗೂ ಉಮ್ರಾನ್ ಮಲ್ಲಿಕ್ ಮಿಂಚಿನ ದಾಳಿ ನಡೆಸಬೇಕು. ವಾಷಿಂಗ್ಟನ್ ಸುಂದರ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ.
ಇನ್ನು ಗುಜರಾತ್ ಟೈಟಾನ್ಸ್ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಆರಂಭಿಕ ಮ್ಯಾಥ್ಯೂ ವೇಡ್, ವಿಜಯ್ ಶಂಕರ್ ರನ್ ದೊಡ್ಡ ಇನ್ನಿಂಗ್ಸ್ ಕಟ್ಟಲು ಪರದಾಡುತ್ತಿದ್ದಾರೆ. ಕಳೆ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಮೊಹ್ಮದ್ ಶಮಿ ಲಯ ಕಳೆದುಕೊಂಡಿದ್ದಾರೆ. ಲಾಕಿ ಫಾಗ್ರ್ಯೂಸನ್, ಸ್ಪಿನ್ನರ್ ರಶೀದ್ ಖಾನ್ ವಿಕೆಟ್‍ಗಳ ಗೊಂಚಲು ಪಡೆಯಬೇಕಿದೆ. ಇಂದಿನ ಪಂದ್ಯ ಹೈದ್ರಾಬಾದ್ ಬೌಲಿಂಗ್ ವರ್ಸಸ್ ಗುಜರಾತ್ ಬ್ಯಾಟಿಂಗ್ ಆಗಿದೆ.
ಸನ್‍ರೈಸರ್ಸ್ ಹೈದ್ರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ನಿಕೊಲೊಸ್ ಪೂರಾನ್, ಏಡಿನ್ ಮಾಕ್‍ರಾಮ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮಾದ್, ರೊಮಾರಿಯೊ ಶೆಪಾರ್ಡ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್, ಟಿ.ನಟರಾಜನ್.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಲಕಂಡೆ, ಲಾಕಿ ಫಗ್ರ್ಯೂಸನ್, ಮೊಹ್ಮದ್ ಶಮಿ.