ಕೆಜಿಎಫ್ ಗಳಿಸಿದ್ದು ೪೦೦ ಕೋಟಿ, ಯಾವಾಗ ೧೦೦೦ ಲೂಟಿ..?

ಕೆಜಿಎಫ್ ನಾಲ್ಕು ದಿನದಲ್ಲಿ ೪೦೦ ಕೋಟಿ ಗಳಿಸಿದೆ, ಒಂದು ಕನ್ನಡ ಸಿನಿಮಾ ಕೂಡ ಲಕ್ಷಗಳಂತೆ ಕೋಟಿಗಳನ್ನು ಗಳಿಸಬಹುದು ಅಂತ ಪ್ರೂವ್ ಮಾಡಿದ ಸಿನಿಮಾ ಕೆಜಿಎಫ್. ಅದಕ್ಕಿಂತ ಮೊದಲಿಗೆ ಹೋಗಿ ಹೇಳೋದಾದ್ರೆ ಲಕ್ಷಗಳಂತೆ ಕೋಟಿಗಳನ್ನ ಸುರಿಯಬಹುದು ಅಂತ ತೋರಿಸಿಕೊಟ್ಟ ಸಿನಿಮಾ ಕೂಡ ಕೆಜಿಎಫ್. ಕೆಜಿಎಫ್ ನುಗ್ತಿರೋ ಸ್ಪೀಡ್ ನೋಡಿದ್ರೆ ಎಲ್ಲಾ ದಾಖಲೆಗಳೂ ಉಡೀಸ್ ಆಗ್ತವೇನೋ ಅನ್ನಿಸ್ತಿದೆ.
ಸದ್ಯ ಕೆಜಿಎಫ್ ಟಾರ್ಗೇಟ್ ೧೦೦೦ ಕೋಟಿ ಆದ್ರೆ ಕೆಜಿಎಫ್‌ಗೆ ಇರೋ ಹೈಪ್ ನೋಡಿದ್ರೆ ಇದು ೨೦೦೦ ಕೋಟಿ ಗಡಿಮುಟ್ಟಬೇಕು. ಕನ್ನಡದಷ್ಟೇ ಜರ‍್ದಸ್ತ್ ರೆಸ್ಪಾನ್ಸ್ ಚಿತ್ರಕ್ಕೆ ಹಿಂದಿಯಲ್ಲೂ ಸಿಕ್ಕಿದೆ, ತೆಲುಗಿನಲ್ಲೂ ಸಿಕ್ಕಿದೆ. ತಮಿಳು ಮಲೆಯಾಳಂನಲ್ಲಿ ಸ್ವಲ್ಪ ಕಡಿಮೆ ಅಂದುಕೊAಡ್ರೂ ಜಗತ್ತಿನಾದ್ಯಂತ ದೊಡ್ಡ ವೆಲ್ಕಮ್ ರಾಕಿಭಾಯ್‌ಗೆ ಸಿಕ್ಕಿ ಮೊದಲ ದಿನಗಳ ಕಲೆಕ್ಷನ್ ಲೆಕ್ಕಾಚಾರದಲ್ಲೂ ಇಲ್ಲೀವರೆಗಿನ ಬಾಲಿವುಡ್ ಸಿನಿಮಾಗಳನ್ನೂ ಹಿಂದಿಕ್ಕಿದ್ದಾನೆ. ಸದ್ಯ ರಾಕಿರೋ ಟಾರ್ಗೆಟ್ ೧೦೦೦ ಕೋಟಿ.
ಇತ್ತೀಚೆಗೆ ತೆರೆಕಂಡ ರಾಜಮೌಳಿ ಆರ್‌ಆರ್‌ಆರ್ ೧೦೦೦ ಕೋಟಿ ಗಳಿಸೋಕೆ ೧೭ ದಿನ ತೆಗೆದುಕೊಂಡಿದೆ. ಒಂದು ಕಡೆ ಆರ್‌ಆರ್‌ಆರ್ ಮತ್ತೊಂದು ಕಡೆ ಬೀಸ್ಟ್ ಮತ್ತು ದೊಡ್ಡ ದೊಡ್ಡ ಸಿನಿಮಾಗಳಿದ್ದರೂ ಕೆಜಿಎಫ್ ಕಲೆಕ್ಷನ್ ಕಿಂಗ್ ಆಗಿ ಮುನ್ನುಗ್ಗಿದ್ದು ಎಷ್ಟು ದಿನದಲ್ಲಿ ೧೦೦೦ ಕೋಟಿ ತಲುಪುತ್ತೆ..? ೨೦೦೦ ಕೋಟಿ ತಲುಪಿ ಬಾಹುಬಲಿಯ ೧೭೦೦ ಕೋಟಿಗಳ ದಾಖಲೆ ಮುರಿಯುತ್ತಾ ಕಾದುನೋಡಬೇಕು.

About The Author