- Advertisement -
ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸದಾ ಆಕ್ಟೀವ್ ಪರ್ಸನ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ..ಆದರೆ ಇಂದು ದಿಢೀರಂತ ಬೆಳಿಗ್ಗೆ ಶಿವಣ್ಣನ ಅಭಿಮಾನಿಗಳ ವಲಯದಲ್ಲಿ ಸುದ್ದಿಯೊಂದು ಹರಿದಾಡಿತು.
ಸದ್ಯ ವೇದಾ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೊ ಶಿವಣ್ಣ ಚಿತ್ರೀಕರಣದ ವೇಳೆಯಲ್ಲಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸೆಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜನರಲ್ ಚೆಕಪ್ ಮಾಡಿಸಿಕೊಂಡ ಬಳಿಕ ಸಂಪೂರ್ಣ ಗುಣಮುಖರಾಗಿರೋ ಶಿವಣ್ಣ ಮತ್ತೆ ಎಂದಿನAತೆ ಶೂಟಿಂಗ್‌ನಲ್ಲಿ ತೊಡಗಿದ್ದಾರೆ.
ಲವಲವಿಕೆಯಿಂದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ಶಿವಣ್ಣನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಮತ್ತೊಂದೆಡೆ ಶಿವಣ್ಣ ಆರೋಗ್ಯವಾಗಿದ್ದಾರೆ ಎಂಬ ಸ್ಟೇಟಸ್ಸನ್ನ ಅಭಿಮಾನಿಗಳೆಲ್ಲರೂ ತಮ್ಮ ಮೊಬೈಲ್‌ಗಳಲ್ಲಿ ಹಾಕಿಕೊಂಡಿದ್ದಾರೆ.
ಕರ್ನಾಟಕ ನ್ಯೂಸ್..
- Advertisement -