Friday, March 14, 2025

Latest Posts

ಇಂದು  ಚೆನ್ನೈ ಕಿಂಗ್ಸ್, ಮುಂಬೈ ಕಾದಾಟ : ಟೂರ್ನಿಯಿಂದ ಹೊರ ಬೀಳುವ ಭೀತಿಯಲ್ಲಿ  ಮುಂಬೈ 

- Advertisement -

ಮುಂಬೈ:  ಸತತ ಆರು ಸೋಲುಗಳಿಂದ ಸೋತು ಟೂರ್ನಿಯಿಂದಲ್ಲೇ ಹೊರ ಬೀಳುವ ಭೀತಿಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡ  ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು  ಎದುರಿಸಲಿದ್ದು ಗೆಲ್ಲಲ್ಲೇ ಬೇಕಾದ ಒತ್ತಡವನ್ನು ಎದುರಿಸುತ್ತಿದೆ.

ಗುರುವಾರ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ  ಈ ಹಿಂದೆ ಐಪಿಎಲ್‍ನಲ್ಲಿ ಸದ್ದು ಮಾಡಿದ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ.

ಐದು ಬಾರಿ ಚಾಂಪಿಯನ್ ಮುಂಬೈ ಆಡಿದ 6 ಪಂದ್ಯಗಳನ್ನು ಸೋತಿವೆ. ಇನ್ನು ಚೆನ್ನೈ ತಂಡ 6  ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದು  5ರಲ್ಲಿ ಸೋತು 2ಅಂಕದೊಂದಿಗೆ ಅಂಕಪಟಿಯಲ್ಲಿ  9ನೇ ಸ್ಥಾನ ಪಡೆದಿದೆ.

ಪ್ರಸಕ್ತ ಐಪಿಎಲ್‍ನಲ್ಲಿ  ಮುಂಬೈ ಒಂದೆ ಒಂದು ಪಂದ್ಯ ಗೆದ್ದಿಲ್ಲ. ಇಂದು ಕೂಡ ಸೋತರೆ ಟೂರ್ನಿಯಿಂದ ಹೊರ ನಡೆಯಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್  ಐದು ಪಂದ್ಯಗಳನ್ನು ಸೋತಿದ್ದರಿಂದ ಇನ್ನೊಂದು ಸೋಲು ಎಲಿಮಿನೇಷನ್ ಸುಳಿಯಲ್ಲಿ  ಸಿಲುಕಿಸಲಿದೆ.

ಮುಂಬೈ ತಂಡದಲ್ಲಿ  ನಾಯಕ ರೋಹಿತ್ ಶರ್ಮಾ  6 ಇನ್ನಿಂಗ್ಸ್‍ಗಳಿಂದ 114 ರನ್ ಗಳಿಸಿದ್ದಾರೆ. ಮುಂಬೈ ತಂಡ ಗೆಲ್ಲಬೇಕಿದ್ದರೆ ರೋಹಿತ್ ಪಾತ್ರ ದೊಡ್ಡದಿರುತ್ತೆಘಿ.  ಮತ್ತೊರ್ವ ಆರಂಭಿಕ ಆಟಗಾರ ಇಶನ್ ಕೀಶನ್ ಅವರನ್ನು ಮುಂಬೈ  ಫ್ರಾಂಚೈಸಿ 15.25 ಕೊಟ್ಟು ಖರೀದಿಸಿತ್ತು. ಆದರೆ  ಇಶನ್ ಆರು ಪಂದ್ಯಗಳಿಂದ ಗಳಿಸಿದ್ದು  ಕೇವಲ 191 ರನ್.

ಡೇವಾಲ್ಡ್ ಬ್ರೇವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ವೈಯಕ್ತಿಕ ಪ್ರರ್ದಶನದ ಮೂಲಕ  ಗಮನ ಸೆಳೆದಿದ್ದಾರೆ. ಕೆಳಕ್ರಮಾಂಕದಲ್ಲಿ  ಆಲ್ರೌಂಡರ್ ಕಿರಾನ್ ಪೊಲಾರ್ಡ್  ನಿರಾಸೆ ಮೂಡಿಸಿದ್ದಾರೆ.

ಇನ್ನು ತಂಡದ ಸೋಲಿಗೆ ಬೌಲಿಂಗ್ ಕಾರಣ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಕಳಪೆಯಾಗಿತ್ತು.  ಟೈಮಲ್ ಮಿಲ್ಸ್‍, ಜಯದೇವ್ ಉನಾದ್ಕತ್,   ಬಸಿಲ್ ಥಂಪಿ, ಮುರುಗನ್ ಅಶ್ವಿನ್ ಬೌಲರ್‍ಗಳು ಎದುರಾಳಿ ಬ್ಯಾಟರ್‍ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು.    

ವೈಯಕ್ತಿಕ ಪ್ರದರ್ಶನದಿಂದ ಪುಟಿದೆದ್ದ ಚೆನ್ನೈ  

ಇನ್ನು ಚೆನ್ನೈ ಕಿಂಗ್ಸ್ ತಂಡದ ಆಟಗಾರರು ವೈಯಕ್ತಿಕ ಪ್ರದರ್ಶನದಿಂದ  ಸದ್ದು ಮಾಡಿದ್ದಾರೆ.ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಫಾರ್ಮ್‍ಗೆ ಮರಳಿದ್ದಾರೆ.ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಆರ್‍ಸಿಬಿ ವಿರುದ್ಧ  ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅನುಭವಿಗಳಾದ ಮೊಯಿನ್ ಅಲಿ ಹಾಗೂ ಅಂಬಾಟಿ ರಾಯ್ಡು  ಹೆಚ್ಚಿನ ಜವಾಬ್ದಾರಿ ವಹಿಸಬೇಕು. ನಾಯಕ ರವೀಂದ್ರ ಜಡೇಜಾ ಹಾಗೂ ` ಧೋನಿ ಫಿನಿಶರ್‍ಗಳಾಗಬೇಕು. ರವೀಂದ್ರ ಜಡೇಜಾ ಸೋಟಕ ಬ್ಯಾಟಿಂಗ್ ಮಾಡಬೇಕು.

ಇನ್ನು ಬೌಲಿಂಗ್ ದಲ್ಲಿ ಡ್ವೇನ್ ಬ್ರಾವೋ, ಮಹೇಶ್ ತೀಕ್ಷ್ಣ  ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿಲ್ಲಘಿ.  ಮುಕೇಶ್ ಚೌ`Àರಿ ಹಾಗೂ ಕ್ರಿಸ್ ಜೋರ್ಡನ್ ದುಬಾರಿ ಬೌಲರ್‍ಗಳಾಗಿದ್ದಾರೆ.

ಸಂಭಾವ್ಯ ತಂಡಗಳು: 

ಚೆನ್ನೈ ತಂಡ:  ಋತುರಾಜ್ ಗಾಯಕ್ವಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯ್ಡು,  ಶಿವಂ ದುಬೆ,  ರವೀಂದ್ರ ಜಡೇಜಾ,  ಎಂ.ಎಸ್.ಧೋನಿ,  ಡ್ವೇನ್ ಬ್ರಾವೋ,  ಕ್ರಿಸ್ ಜೋರ್ಡನ್,  ಮಹೇಶ್ ತೀಕ್ಷ್ಣಘಿ,  ಮುಖೇಶ್ ಚೌಧರಿ.

ಮುಂಬೈ ಇಂಡಿಯನ್ಸ್‍: ಇಶನ್ ಕಿಶನ್,  ರೋಹಿತ್ ಶರ್ಮಾ, ಡೇವಾಲ್ಡ್ ಬ್ರೇವಿಸ್, ಸೂರ್ಯ  ಕುಮಾರ್,  ತಿಲಕ್ ವರ್ಮಾ,  ಕಿರಾನ್ ಪೊಲಾರ್ಡ್,  ಫಾಬಿಯಾನ್ ಅಲೆನ್,  ಜಯದೇವ್ ಉನಾದ್ಕತ್,  ಮುರುಗನ್ ಅಶ್ವಿನ್,  ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್,

 

 

- Advertisement -

Latest Posts

Don't Miss