Tuesday, December 17, 2024

Latest Posts

ಛೀ.. ಥೂ ಅಂತ ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಎಚ್ಚೆತ್ತುಕೊಳ್ತಿದೆ ಸರ್ಕಾರ..?

- Advertisement -

ಬಂತಲ್ಲ ಎಲೆಕ್ಷನ್ ಈಗ ಎಲ್ಲಾ ಎಚ್ಚೆತ್ತುಕೊಳ್ತಿದೆ ಸರ್ಕಾರ. ನೋಡ್ರಪ್ಪಾ ನಮ್ ಸರ್ಕಾರ ನಿದ್ದೆಯಿಂದ ಎದ್ದೇಳೋಕೆ ಶುರುಮಾಡಿದೆ. ಈಗ ಒಂದು ವರ್ಷದೊಳಗೆ ೫ ಲಕ್ಷ ಮನೆ ಮಾಡ್ತೀವಿ ಅಂತ ಪ್ರತಿಜ್ಞೆ ಮಾಡಿದೆ. ಈ ಪ್ರತಿಜ್ಞೆ, ಭರವಸೆ, ಸೂಕ್ತ ಕ್ರಮ, ಬಿಗಿ ಕ್ರಮ ಅನ್ನೋ ಪದಗಳೆಲ್ಲಾ ಸವಕಲಾಗಿ ಹೋಗಿವೆ. ಲಜ್ಜೆಗೆಟ್ಟ ಸರ್ಕಾರ, ಕೆಲಸ ಮಾಡೋಕಾಗಲ್ವಾ, ಛೀ ಥೂ ಅಂತ ಹೈಕೋರ್ಟ್ ಛೀಮಾರಿ ಹಾಕ್ತಿದೆ. ಅದೆಲ್ಲಾ ಯಾರಿಗೂ ಬೇಜಾರಾಗೋದಿಲ್ಲ ಬಿಡಿ.
ಈಗ ಸರ್ಕಾರ ಚುನಾವಣೆಗೆ ರೆಡಿಯಾಗ್ತಿರೋ ಹಾಕಿದೆ ಯಾಕಂದ್ರೆ ನೀತಿ ಸಂಹಿತೆ ಬಂದಮೇಲೆ ಈ ಥರ ಎಲ್ಲಾ ಭರವಸೆ ಕೊಡಂಗಿಲ್ಲ, ಅದ್ಕೆ ಈಗ್ಲೇ ಭರವಸೆ ಕೊಟ್ಟು ಜನರ ಕಣ್ಣಿಗೆ ಮಣ್ಣೆರೆಚೋ ಪ್ರಯತ್ನ ಮಾಡ್ತಾನೇ ಇರ‍್ತಾರೆ. ಇದೂ ಅಂತದ್ದೇ ಪ್ರಯತ್ನಾನಾ ಗೊತ್ತಿಲ್ಲ. ಆದ್ರೆ ಗ್ರಾಮಾಂತರ ಪ್ರದೇಶದಲ್ಲಿ ೫ ಲಕ್ಷ ಮನೆ ನಿರ್ಮಾಣ ಮಾಡ್ತೀವಿ ಅಂತ ನಿರ್ಧರಿಸಿದೆ ಸರ್ಕಾರದ ವಸತಿ ಇಲಾಖೆ.
ಚುನಾವಣೆಯೊಳಗೆ ನಿರ್ಮಿಸಬೇಕು ಅಂತ ಹೊರಟಿರೋ ಇವರಿಗೆ ಇಲ್ಲೀರ‍್ಗೂ ಇದ್ದಷ್ಟು ದಿನದಲ್ಲಿ ಮಾಡೋಕೆ ಆಗರ‍್ಲಿಲ್ವಾ ಅಂಥ ನೀವು ಕೇಳೋದಾದ್ರೆ, ನಿಧಾನಕ್ಕೆ ಮಾಡ್ತಿದ್ರು ಆದ್ರೆ ಇಷ್ಟು ಆಗರ‍್ಲಿಲ್ಲ. ಅದೇ ಸಿ.ಎಂ ರ‍್ತಾರೆ ಅಂದ್ರೆ ರೋಡ್ ಸರಿ ಮಾಡೋದು ಪಿ.ಎಂ ರ‍್ತಾರೆ ಅಂದ್ರೆ ಗೋಡೆ ಕಟ್ಟೋದು ಮಾಡ್ತಾರಲ್ಲ ಹಾಗೆ ಎಲೆಕ್ಷನ್ ಬಂತು ಅಂತ ಮನೆ ಕಟ್ಟೋಕೆ ಹೊರಟಿದ್ದಾರೆ. ಅರ್ಜೆಂಟಲ್ಲಿ ಮಾಡೋಕೆ ಹೊರಟು ಕಳಪೆ ಕಾಮಗಾರಿ ಆಗದಿದ್ರೆ ಸಾಕು. ಇನ್ನು ಹಳ್ಳಿಕಡೆಗಳಲ್ಲಂತೂ ಲಂಚ ತಾಂಡವಾಡ್ತಿದೆ. ಮನೆ ಕಟ್ಟೊಕೆ ಬಿಲ್ ಪಾಸ್ ಮಾಡಬೇಕು ಅಂದ್ರೆ ಅದಕ್ಕೊಂದಿಷ್ಟು ಹಣ ಕೊಡಲೇಬೇಕು. ಈ ಸರ್ಕಾರಗಳು ಕೊಟ್ಟ ಟೈಂನೊಳಗೆ ಮನೇನೂ ಕಟ್ಟಲ್ಲ. ಯಾವ ಭರವಸೇನೂ ಈಡೇರಿಸಲ್ಲ. ಇದ್ದಿದ್ರಲ್ಲ ಒದ್ದಾಡ್ಬೇಕಷ್ಟೇ ಅನ್ನಬಹುದು..!

ಓಂ
ಕರ್ನಾಟಕ ಟಿವಿ

- Advertisement -

Latest Posts

Don't Miss