- Advertisement -
ಮೈಸೂರು: ಮಗಳೊಂದಿಗೆ ಶೂಟಿಂಗ್ ನಲ್ಲಿ ತೆರಳಿದ್ದಂತ ಹಿರಿಯ ನಟಿ ತಾರಾ ಅನುರಾದ ಅವರ ತಾಯಿ, ಪುಷ್ಪ (76) ಇಂದು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಮೈಸೂರಿನಲ್ಲಿ ಮಗಳೊಂದಿಗೆ ಪುಷ್ಟ ಅವರು ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ವಾಂತಿ ಕಾಣಿಸಿಕೊಂಡು, ತೀವ್ರವಾಗಿ ಅಸ್ವಸ್ಥಗೊಂಡಿದ್ದರು.
ಕೂಡಲೇ ಹಿರಿಯ ನಟಿ ತಾರಾ ಅನುರಾಧ ಅವರು, ತಾಯಿ ಪುಷ್ಪ ಅವರನ್ನು, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು. ಆದ್ರೇ.. ಸಂಜೆ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
- Advertisement -