ಬಾಗಲಕೋಟೆ: ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ ದಾಂಡೇಲಿಯಲ್ಲಿ ನಡೆಯುವ 10 ದಿನಗಳ ಉಚಿತ ಟ್ರಾವೆಲ್ & ಟುರಿಸ್ಟ ಗೈಡ್ ತರಬೇತಿಗೆ 18 ರಿಂದ 45 ವರ್ಷ ವಯೋಮಾನದ ಯುವಕರಿಗೆ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು.
ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊನಂ., ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ ಸದ್ಯ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಮೇ 10 ರೊಳಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ, ವಿಸ್ತರಣಾ ಕೇಂದ್ರ ಹಸನಮಾಳ, ದಾಂಡೇಲಿ-58132 ದೂಸಂ.08284-298547, 6363429889, 9449782425ಗೆ ಇವರಿಗೆ ಸಲ್ಲಿಸುವಂತೆ ಆರ್‍ಸೆಟಿ ಸಂಸ್ಥೆ ಪ್ರಕಟಣೆ ತಿಳಿಸಿದೆ.




