ಈ ಫೇಸ್‌ ಪ್ಯಾಕ್‌ ಮುಖಕ್ಕೆ ಹಚ್ಚಿ, ಮುಖದ ಅಂದ ಹೆಚ್ಚಿಸಿಕೊಳ್ಳಿ.!

ಮೊಡವೆಗಳಿಲ್ಲದ ಮುಖವನ್ನು ಪಡೆಯಬೇಕೆಂಬ ಆಸೆ ಎಲ್ಲರಿಗೂ ಇದ್ದೆ ಇರುತ್ತೆ. ಆದರೆ ನಿದ್ದೆ ಸರಿಯಾಗಿ ಮಾಡದೇ ಇರುವುದು, ಹೊರಗಿನ ಧೂಳಿನ ವಾತಾವರಣದಿಂದ ಮುಖ ಡಲ್‌ ಆಗಿ ಚರ್ಮವು  ಕಾಂತಿ ಕಳೆದುಕೊಳ್ಳುತ್ತದೆ. ನಾವು ಎಷ್ಟೇ ಮೇಕಪ್‌ ಮಾಡಬಹುದು ಆದರೆ ಮುಖದ ನಿಜವಾದ ಬಣ್ಣ ಮೇಕಪ್‌ ಮಾಸಿದ ಸ್ವಲ್ಪ ಸಮಯದಲ್ಲಿಯೇ ಹೊಳಪನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಮುಖದ ಚರ್ಮ ಆರೋಗ್ಯವಾಗಿದ್ದರೆ ಮೇಕಪ್‌ ಕೂಡ ಇನ್ನೂ ಅಂದವಾಗಿ ಕಾಣುತ್ತದೆ.

 

ಮನೆಯಲ್ಲಿ ಪುರುಸೊತ್ತಿಲ್ಲದ ಕಾರಣ ಫೇಸ್‌ಪ್ಯಾಕ್‌ಗಳನ್ನು ಹಾಕಿಸಿಕೊಳ್ಳಲು ಮಹಿಳೆಯರು ಪಾರ್ಲರ್‌ಗಳಿಗೆ ಹೋಗಿ ಅನಗತ್ಯ ಹಣವನ್ನು ಖರ್ಚು ಮಾಡುತ್ತಾರೆ. ಹೀಗೆ ಮಾಡುವುದಕ್ಕಿಂತ ಮನಯಲ್ಲಿಯೇ ಸುಲಭವಾಗಿ ಫೇಸ್‌ಪ್ಯಾಕ್‌ಗಳನ್ನು ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಫೇಸ್‌ಪ್ಯಾಕ್‌ಗಳಲ್ಲಿ ಹಲವು ತರಹ ಇದೆ. ಅದರಲ್ಲಿ ಸೇಬು ಹಣ್ಣಿನ ಸಿಪ್ಪೆಯ ಫೇಸ್‌ಪ್ಯಾಕ್‌ ಕೂಡ ಒಂದು. ಇದನ್ನು ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಯಲ್ಲ ಕಾಲದಲ್ಲೂ ಸಹ ಸೇಬಿನ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ತಂದು ಫೇಸ್‌ ಪ್ಯಾಕ್‌ ಮಾಡಿ ಹಚ್ಚಿದರೆ ಚರ್ಮ ಮೃದುವಾಗುವುದಲ್ಲದೆ ಗ್ಲೋ ಕೂಡ ಬರತ್ತದೆ. ಇನ್ನು ಸೇಬಿನ ಫೇಸ್‌ಪ್ಯಾಕ್‌ ತಯಾರಿಸುವುದು ಹೇಗೆ, ಅದನ್ನ ಹೇಗೆ ಹಚ್ಚಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಯಾವುದೇ ರೀತಿಯ ಫೇಸ್‌ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ತಣ್ಣನೆಯ ನೀರಿನಿಂದ ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಬೇಕು. ಇದರಿಂದ ಮುಖದ ಮೇಲಿರುವ ಕೊಳೆ, ಧೂಳು ಸ್ವಚ್ಛವಾಗಿ, ಪೇಸ್‌ಪ್ಯಾಕ್‌ನ ಅಂಶಗಳು ಮುಖದ ಮೇಲೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಆದ್ದರಿಂದ ಫೇಸ್‌ಪ್ಯಾಕ್‌ ಹಾಕುವ ಮುಂಚೆ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಫೇಸ್‌ಪ್ಯಾಕ್‌ ತಯಾರಿಸಿ ಹಚ್ಚಿಕೊಳ್ಳುವುದು ಉತ್ತಮ.

ಸೇಬುವಿನ ಫೇಸ್‌ಪ್ಯಾಕ್‌ ಅನ್ನು ಸುಲಭವಾಗಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ.

ಸೇಬುವಿನ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಒಣಗಿಸಿಕೊಳ್ಳಬೇಕು. ನಂತರ ಒಣಗಿಸಿದ ಸೇಬುವಿನ ಸಿಪ್ಪೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿ ಮಾಡಿಕೊಂಡ ಸೇಬುವಿನ ಸಿಪ್ಪೆಗೆ ಅರ್ಧ ಚಮಚ ಜೇನುತುಪ್ಪ, 2 ಚಮಚ ಹಾಲನ್ನು ಆಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ತೊಳೆದ ಮುಖ ಒಣಗಿದ ನಂತರ ರೆಡಿ ಮಾಡಿಕೊಂಡ ಫೇಸ್‌ಪ್ಯಾಕ್‌ನ್ನು ಮುಖದ ಮೇಲೆ ಹಚ್ಚಿಕೊಳ್ಳಿ. 25 ನಿಮಿಷಗಳ ನಂತರ ಕೈಯಿಂದ ಮುಖವನ್ನು ನಿಧಾನವಾಗಿ ಉಜ್ಜಿರಿ. ಹೀಗೆ ಮಾಡುವುದರಿಂದ ಮುಖಕ್ಕೆ ಹಚ್ಚಿದ್ದ ಫೇಸ್‌ಪ್ಯಾಕ್‌ ಚುರು ಚುರಾಗಿ ಕೆಳಗೆ ಬೀಳುತ್ತದೆ. ಇದೆಲ್ಲ ಆದ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ. ಮುಖವನ್ನು ತೊಳೆಯುವಾಗ ಯಾವುದೇ ಸೋಪ್ ಅಥವಾ ಪೇಸ್‌ ವಾಶ್‌ಗಳನ್ನು ಬಳಸಬೇಡಿ. ಹಾಗೆಯೆ ಬಿಸಿ ನೀರಿನಿಂದಲೂ ಕೂಡ ಮುಖವನ್ನು ತೊಳೆಯಬೇಡಿ. ಇದನ್ನು ವಾರದಲ್ಲಿ ಒಂದು ಇಲ್ಲ ಎರಡು ಬಾರಿ ಮಾಡುವುದು ಉತ್ತಮ.

ನಂತರ ಪೇಸ್‌ಪ್ಯಾಕ್‌ ಹಚ್ಚಿದ ಬಳಿಕ ಮುಖವನ್ನು ಚೆನ್ನಾಗಿ ತೊಳೆದುಕೊಂಡು, ನೀವು ಯಾವಾಗಲೂ ಬಳಸುವ ಮಾಶ್ಚರೈಸರ್‌ನ್ನು ಹಚ್ಚಿರಿ. ಅಥವಾ ಸನ್‌ಸ್ಕ್ರೀನ್‌ನ್ನು ಕೂಡ ಬಳಸಬಹುದು.

ಸೇಬು ಹಣ್ಣಿನ ಸಿಪ್ಪೆಯ ಫೇಸ್‌ಪ್ಯಾಕ್‌ ಉಪಯೋಗಗಳೇನೆಂದರೆ. ಇದು ನಿಮ್ಮ ಮುಖ ಎಣ್ಣೆಯಾಗಿರುವುದನ್ನು ಕಡಿಮೆ ಮಾಡುತ್ತದೆ ಹಾಗೆ ಹೆಚ್ಚು ಗ್ಲೋವಾಗಿ ಕಾಣಲು ಸಹಾಯ ಮಾಡುತ್ತದೆ. ಇನ್ನು ಈ ಫೇಸ್‌ಪ್ಯಾಕ್‌ ಹಚ್ಚುವುದರಿಂದ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಮುಖದ ಮೇಲಿನ ಕಪ್ಪು ಕಲೆಗಳು, ಡಾರ್ಕ್‌ ಸರ್ಕಲ್ಸ್ ನಿವಾರಣೆಗೂ ಕೂಡ ಸಹಾಯ ಮಾಡುತ್ತದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

About The Author