ಸುದೀಪ್ ರವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕಿಚ್ಚ ಎಂದೇ ಖ್ಯಾತಿ ಪಡೆದಿರುವ ಕಿಚ್ಚ ಸುದೀಪ್ ಹಾಗು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಶನ್ ನಲ್ಲಿ ಒಂದು ಹೊಸ ಸಿನಿಮಾ ಮೂಡಿಬರ್ತಿದೆ. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾದು ಕುಳಿತ್ತಿದ್ದು ಇದೀಗ ಸಿನಿಮಾ ಬಿಡುಗಡೆ ದಿನಾಂಕವನ್ನು ನಿಗಧಿಪಡಿಸಿದೆ.
‘ಕೆಜಿಎಫ್ 2’ ಸಿನಿಮಾದ ಬಗ್ಗೆ, ಕರ್ನಾಟಕದಲ್ಲಿ ಮಾತ್ರ ಅಲ್ಲದೆ, ಎಲ್ಲ ಕಡೆ ಈ ಸಿನಿಮಾದ್ದೇ ಮಾತುಕತೆ. ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ತಿಂಗಳುಗಳು ಕಳೆದು ಬಂದಿದೆ. ಆದರೆ ಈ ಚಿತ್ರದ ಕ್ರೇಜ್ ಮಾತ್ರ ಇನ್ನು ಕಡಿಮೆ ಆಗಿಲ್ಲ. ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಹಲವು ಕಡೆಗಳಲ್ಲಿ ‘ಕೆಜಿಎಫ್ 2’ ಚಿತ್ರದ ಬಗ್ಗೆ, ಅದರ ಗಳಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ.
ಆದರೆ ಇದೀಗ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗುತ್ತಿದೆ. ಹಾಗಾಗಿ ಈಗ ಅಭಿಮಾನಿಗಳ ಗಮನ ಆ ಪ್ಯಾನ್ ಇಂಡಿಯಾ ಸಿನಿಮಾದ ಮೇಲೆ ಇದೆ. ಇನ್ನು ಬಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲರೂ ಕನ್ನಡದ ಮುಂದಿನ ಚಿತ್ರ ಯಾವುದು ಎಂದು ಅದರ ಬಗ್ಗೆ ಮಾತನಾಡುವಂತೆ ಆಗಿದೆ.
ಈ ಸಿನಿಮಾ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಿಲೀಸ್ ಗೆ ರೆಡಿ ಇರುವ ಸುದೀಪ್ ಅವರ ಹೊಸ ಸಿನಿಮಾ ‘ವಿಕ್ರಾಂತ್ ರೋಣ’. ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ಮುಕಾಂತರ ಬಹಳ ಕುತೂಹಲ ಸೃಷ್ಟಿಸಿದ್ದು, ಕನ್ನಡದ ಬಹುದೊಡ್ಡ ಸಿನಿಮಾಗಳಲ್ಲಿ ಇದು ಕೂಡ ಒಂದು. ‘ವಿಕ್ರಾಂತ್ ರೋಣ’ ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆಯ ಹುಟ್ಟಿಸಿದೆ. ಅದಷ್ಟೇ ಅಲ್ಲದೆ ‘ವಿಕ್ರಾಂತ್ ರೋಣ’ ಸಿನಿಮಾ ‘ಕೆಜಿಎಫ್ -2’ ಸಿನಿಮಾಗೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಈ ಸಿನಿಮಾವನ್ನು 7 ಭಾಷೆಗಳಲ್ಲಿ ತೆರೆಯ ಮೇಲೆ ತರುತ್ತಿರುವುದು ವಿಶೇಷವಾಗಿದೆ.
‘ಕೆಜಿಎಫ್ 2’ ಸಿನಿಮಾ ಓಪನಿಂಗ್ ದಿನವೇ ದೊಡ್ಡ ಮಟ್ಟದ ದಾಖಲೆ ಮಾಡುವಲ್ಲಿ ಯಶಶ್ವಿಯಾಗಿತ್ತು. ಇದೀಗ ‘ವಿಕ್ರಾಂತ್ ರೋಣ’ ಸಿನಿಮಕ್ಕೂ ಕೂಡ ಈ ಸವಾಲು ಎದುರಾಗಿದೆ. ಇನ್ನು ವಿಕ್ರಾಂತ್ ರೋಣ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತೆ, ಬಾಕ್ಸಾಫೀಸ್ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
‘ವಿಕ್ರಾಂತ್ ರೋಣ’ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇರುವುದರಿಂದ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತೆ ಎಂಬ ಭರವಸೆ ಇದೆ. ಬಾಲಿವುಡ್ನಲ್ಲಿ ಸೌತ್ನ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಿವೆ. ಈ ಸಾಲಿಗೆ ‘ವಿಕ್ರಾಂತ್ ರೋಣ’ ಕೂಡ ಸೇರ್ಪಡೆಯಾಗಲಿದೆ. ಇನ್ನು ‘ವಿಕ್ರಾಂತ್ ರೋಣ’ ಸಿನಿಮಾ 3D ಅವತಾರದಲ್ಲಿ ಸದ್ದು ಮಾಡಲು ಇದೆ ಜುಲೈ 28ಕ್ಕೆ ತೆರೆಯ ಮೇಲೆ ಬರಲಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ




