ಹೇಳಿಕೆಗೆ ತಕ್ಕಂತೆ ದಾಖಲೆ, ಪುರಾವೆಗಳನ್ನು ಒದಗಿಸುವುದು ಕರ್ತವ್ಯ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ

ಬೆಂಗಳೂರು : ಯಾರು ಏನು ಹೇಳಿಕೆ ಕೊಡುತ್ತಾರೋ ಆ ಹೇಳಿಕೆಗಳಿಗೆ ಅವರೇ ಜವಾಬ್ದಾರರು ಹಾಗೂ ಅವರ ಹೇಳಿಕೆಗೆ ತಕ್ಕಂತೆ ದಾಖಲೆ, ಪುರಾವೆಗಳನ್ನು ಒದಗಿಸುವುದು ಅವರ ಕರ್ತವ್ಯ ಕೂಡ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಅವರು ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಯಾರು ಏನು ಹೇಳಿಕೆ ನೀಡುತ್ತಾರೋ ಅದಕ್ಕೆ ಬದ್ಧವಾಗಿ ದಾಖಲೆಗಳನ್ನು ನೀಡಲಿ. ತನಿಖೆಗೆ ಅದನ್ನು ಅಳವಡಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಪಿ.ಎಸ್.ಐ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ದಾಖಲೆಗಳನ್ನು ಒದಗಿಸಿದರೆ ತನಿಖೆಗೆ ಒಳಪಡಿಸುತ್ತೇವೆ ಎಂದರು.

ಪ್ರಿಯಾಂಕ ಖರ್ಗೆ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಖರ್ಗೆ ಮೂಲ ಕಾಂಗ್ರೆಸ್ಸಿಗರು. ಅವರಿಗೆ ಇದೆಲ್ಲಾ ಕರಗತ ಆಗಿದೆ. ಖರ್ಗೆಯವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

About The Author