ಸರಿಯಾಗಿ ನೀರು ಪೂರೈಸದ ಕಾರಣ, ಪಿಡಿಓ ಟೇಬಲ್‌ಗೆ ಆಕಳು ಕಟ್ಟಿ, ಮೇವು ಇರಿಸಿ ಪ್ರತಿಭಟನೆ

Haveri News: ಗ್ರಾಮಸ್ಥರಿಗೆ ಸರಿಯಾಗಿ ನೀರಿನ ಪೂರೈಕೆ ಮಾಡದ ಕಾರಣ, ಗ್ರಾಮಸ್ಥರು ತಮ್ಮ ಮನೆಯ ಆಕಳನ್ನು ಪಂಚಾಯತ್‌ಗೆ ತಂದು ಕಟ್ಟಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಸಮರ್ಪಕವಾಗಿ ನೀರು ಕೊಡದ ಪಂಚಾಯತ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾಗಿ ನೀರು ಪೂರೈಕೆಯಾಗದ ಕಾರಣ, ಗ್ರಾಮಸ್ಖರು ತಮ್ಮ ಆಕಳೊಂದಿಗೆ ಪಿಡಿಓ ಕಚೇರಿಗೆ ಬಂದು ಅಲ್ಲಿ ಅಧಿಕಾರಿಗಳ ಟೇಬಲ್‌ಗೆ ಕಳು ಕಟ್ಟಿ, ಅಲ್ಲೇ ಅದಕ್ಕೆ ಮೇವು ಹಾಕಿ, ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಈ ಕಡೂರು ಗ್ರಾಮದಲ್ಲಿ 5 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಅಲ್ಲದೇ, ಇಲ್ಲಿನ ಜನ ಕೃಷಿ ನಂಬಿಕೊಂಡಿದ್ದು, ಜಾನುವಾರುಗಳನ್ನು ಸಾಕಿದ್ದಾರೆ. ಆದ್ರೆ 10-15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಇದರಿಂದ ಜನರ ಬದುಕು ಕಠಿಣವಾಗಿರುವುದಲ್ಲದೇ, ಆಕಳುಗಳಿಗೂ ಕುಡಿಯಲು ನೀರು ಸಾಕಾಗುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆಯಾಗುತ್ತಿದೆ.ತುಂಗಭದ್ರಾ ನದಿ ಮೂಲಕ ನೀರು ಪೂರೈಕೆಯಾಗುತ್ತಿದ್ದರೂ ಗ್ರಾಮಸ್ಥರಿಗೆ ಸಂಕಷ್ಟ ಬಂದೊದಗಿದ್ದು, ಇದೀಗ ಸರಿಯಾದ ಸಮಯಕ್ಕೆ ನೀರು ಪೂರೈಸಿ ಎಂದು ಗ್ರಾಮಸ್ಥರು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.

About The Author