BREAKING NEWS: 7 MLC ಸ್ಥಾನಗಳಿಗೆ ಚುನಾವಣೆಗೆ ಮುಹೂರ್ತ ಫಿಕ್ಸ್: ಜೂ.3ರಂದು ಮತದಾನ, ಫಲಿತಾಂಶ

ಬೆಂಗಳೂರು: ಅವಧಿ ಮುಕ್ತಾಯಗೊಳ್ಳುತ್ತಿರುವಂತ ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ನಡೆಸೋದಕ್ಕಾಗಿ ದಿನಾಂಕ ನಿಗದಿ ಮಾಡಲಾಗಿದೆ. ಮುಂದಿನ ತಿಂಗಳ ಜೂನ್ 3, 2022ರಂದು ಮತದಾನಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ.

ಈ ಕುರಿತಂತೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ದಿನಾಂಕ 14-06-2022ರಂದು ಕರ್ನಾಟಕದ 7 ವಿಧಾನ ಪರಿಷತ್ ಸದಸ್ಯರ ಕಾಲಾವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ 17-05-2022ರಂದು ಅಧಿಸೂಚನೆ ಹೊರಟಿಸಲಾಗುತ್ತದೆ ಎಂದು ತಿಳಿಸಿದೆ.

ದಿನಾಂಕ 24-05-2022ರಿಂದ ನಾಮಪತ್ರಗಳ ಸಲ್ಲಿಕೆ ಆರಂಭಗೊಳ್ಳಲಿದೆ. ದಿನಾಂಕ 25-05-2022ರಂದು ಸಲ್ಲಿಕೆಯಾದಂತ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿನಾಂಕ 27-05-2022ರಂದು ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 03-06-2022ರಂದು ಪರಿಷತ್ ಸದಸ್ಯ ಸ್ಥಾನಗಳಿಗೆ ಮತದಾನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಅಂದು ಸಂಜೆ 5 ಗಂಟೆಯಿಂದ ಮತಏಣಿಕೆ ಆರಂಭಗೊಂಡು, ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿಸಿದೆ.

ಅಂದಹಾಗೇ ದಿನಾಂಕ 14-06-2022ರಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದಂತ ಲಕ್ಷ್ಮಣ್ ಸವದಿ, ರಾಮಪ್ಪ ತಿಮ್ಮಾಪುರ್, ಅಲ್ಲಂ ವೀರಭದ್ರಪ್ಪ, ಹೆಚ್ ಎಂ ರಮೇಶ್ ಗೌಡ, ವೀಣಾ ಅಚ್ಚಯ್ಯ ಎಸ್, ನಾರಾಯಣ ಸ್ವಾಮಿ ಕೆ.ವಿ ಮತ್ತು ಲೇಹರ್ ಸಿಂಗ್ ಅವರ ಕಾಲಾವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನಲೆಯಲ್ಲಿಯೇ ದಿನಾಂಕ 03-06-2022ರಂದು ಈ ಸ್ಥಾನಗಳಿಗೆ ಸದಸ್ಯರ ಆಯ್ಕೆಗಾಗಿ ಚುನಾವಣೆ ನಿಗದಿಪಡಿಸಲಾಗಿದೆ.

About The Author