Saturday, April 19, 2025

Latest Posts

ಥಾಮಸ್ ಕಪ್ ಗೆದ್ದು  ಇತಿಹಾಸ ನಿರ್ಮಿಸಿದ ಭಾರತ 

- Advertisement -

ಬ್ಯಾಂಕಾಕ್:  ಅತ್ಯದ್ಭುತ ಪ್ರದರ್ಶನ ನೀಡಿದ ಭಾರತ ಬ್ಯಾಡ್ಮಿಂಟನ್ ಪುರುಷರ ತಂಡ ಥಾಮಸ್ ಕಪ್ ಗೆದ್ದು ಮೊದಲ ಬಾರಿಗೆ ಇತಿಹಾಸ ನಿರ್ಮಿಸಿದೆ.

` ಪುರುಷರ ವಿಭಾಗದ  ಫೈನಲ್‍ನಲ್ಲಿ ಬಲಿಷ್ಠ  ಇಂಡೋನೇಷ್ಯಾ ವಿರುದ್ಧ  ಭಾರತ 3-0 ಅಂತರದಿಂದ ಗೆದ್ದು ಬೀಗಿತು.

73 ವರ್ಷದ ಇತಿಹಾಸದಲ್ಲಿ ಭಾರತ ಈ ಟೂರ್ನಿಯಲ್ಲಿ ಫೈನಲ್ ಕೂಡ ತಲುಪಿರಲಿಲ್ಲ. ಆದರೆ ಇದೀಗ ಪದಕವನ್ನು ಐತಿಹಾಸಿಕ ಸಾಧನೆ ಮಾಡಿದೆ. ಈ ಪ್ರತಿಷ್ಠತ ಟೂರ್ನಿ ಗೆದ್ದ 6ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ.

ಈ ಹಿಂದೆ ಚೀನಾ, ಇಂಡೋನೇಷ್ಯಾ,ಜಪಾನ್, ಡೆನ್‍ಮಾರ್ಕ್, ಮಲೇಷ್ಯಾ ದೇಶಗಳು ಥಾಮಸ್ ಕಪ್ ಗೆದ್ದು ಮುಡಿಗೇರಿಸಿಕೊಂಡಿದ್ದವು.

ಟೂರ್ನಿಗೂ ಮುನ್ನ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರಲಿಲ್ಲ.  ಆದರೆ ಯುವ ಬ್ಯಾಡ್ಮಿಂಟನ್ ಆಟಗಾರರು ಅತ್ಯದ್ಬುತ ಪ್ರದರ್ಶನ ನೀಡಿ ಬ್ಯಾಡ್ಮಿಂಟನ್ ಜಗತನ್ನೆ ನಿಬ್ಬೆರೆಗಾಗಿಸಿದ್ದಾರೆ.

ವಿಶ್ವ  ಚಾಂಪಿಯನ್‍ಶಿಪ್ ಪದಕ ವಿಜೇತರಾದ ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್,  ಡಬಲ್ಸ್ ಆಟಗಾರರಾದ ಚಿರಾಗ್ ಶೆಟ್ಟಿ ಮತ್ತು ಸ್ವಸ್ತಿಕ್ ಸಾಯಿರಾಜ್  ರಾಂಕಿರೆಡ್ಡಿ 14 ಬಾರಿ ಚಾಂಪಿಯನ್ ಅನ್ನ ಬಗ್ಗು ಬಡಿದರು.

ಫೈನಲ್‍ನ  ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ  ಲಕ್ಷ್ಯ ಸೇನ್ ವಿಶ್ವದ 5ನೇ ರ್ಯಾಂಕ್ ಆಟಗಾರ  ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ 8-21,21-17,21-16 ಅಂಕಗಳಿಂದ ಗೆದ್ದು ಭಾರತಕ್ಕೆ 1-0 ಮುನ್ನಡೆ ನೀಡಿದರು.

ಎರಡನೆ ಪಂದ್ಯದಲ್ಲಿ ಪುರುಷರ ವಿಭಾಗದ ಡಬಲ್ಸ್‍ನಲ್ಲಿ  ಚಿರಾಗ್ ಶೆಟ್ಟಿ ಮತ್ತು ಸ್ವಸ್ತಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಎದುರಾಳಿ ಮೊಹ್ಮದ್ ಆಹಸಾನ್ ಹಾಗೂ ಕೆವಿನ್ ಸಂಜಯ ಸುಖಾಮುಲ್ಜೊ  ವಿರುದ್ಧ ಮಾಲ್ಕು ಗೇಮ್ ಪಾಯಿಂಟ್‍ಗಳನ್ನು ರಕ್ಷಿಸಿ 18-21,23-21,21-19 ಅಂಕಗಳಿಂದ ಗೆದ್ದರು.

ನಿರ್ಣಾಯಕ ಎರಡನೆ ಸಿಂಗಲ್ಸ್‍ನಲ್ಲಿ  ಅಗ್ರ ಆಟಗಾರ ಕಿದಂಬಿ ಶ್ರೀಕಾಂತ್, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೋನಾಥನ್ ಕ್ರಿಸ್ಟಿ ವಿರುದ್ಧ 21-15, 23-21 ಅಂಕಗಳಿಂದ ಗೆದ್ದು  ಇತಿಹಾಸ ಬರೆದರು.

ಶ್ರೀಕಾಂತ್ ಗೆಲ್ಲುತ್ತಿದ್ದಂತೆ ಇಡೀ ಭಾರತ ತಂಡ ಆಟಗಾರರು ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದರು. ಅಟಗಾರರು ಕುಣಿದು ಕುಪ್ಪಳಿಸಿದರು.

ಭಾರತ ಬ್ಯಾಡ್ಮಿಂಟನ್ ಇತಿಹಾಸ ಬರೆದಿದೆ.  ಥಾಮಸ್ ಕಪ್ ಗೆಲುವನ್ನು ಇಡೀ ದೇಶ ಸಂಭ್ರಮಿಸಿದೆ. ತಂಡಕ್ಕೆ ಶುಭಾಶಯ. `ಭವಿಷ್ಯದ ಟೂರ್ನಿಗಳಿಗೆ ಶುಭವಾಗಲಿ. ನಿಮ್ಮ ಗೆಲುವು ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಶುಭಾಕೋರಿದ್ದಾರೆ.

ಎರಡು ಕೋಟಿ ರೂ. ಬಹುಮಾನ 

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ  ಭಾರತ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ  ಕೇಂದ್ರ ಕ್ರೀಡಾ ಸಚಿವಾಲಯ  ಒಂದು ಕೋಟಿ ರೂ. ಬಹುಮಾನ ಘೋಷಿಸಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಕೂಡ 1 ಕೋಟಿ ರೂ. ಘೋಷಿಸಿದೆ.ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬಹುಮಾನ ಘೋಷಿಸಿ ವಿಜೇತ ತಂಡವನ್ನು ಅಭಿನಂದಿಸಿದರು. ಈ ಐತಿಹಾಸಿಕ ಸಾಧನೆ ಬಗ್ಗೆ  ಭಾರತೀಯ ಬ್ಯಾಡ್ಮಿಂಟನ್ ಅಸೋಶಿಯೇಷನ್ ಆಫ್ ಇಂಡಿಯಾ, ಧೈರ್ಯ ಹಾಗೂ ಬದ್ಧತೆಯ ಪ್ರದರ್ಶನದಿಂದ ಥಾಮಸ್ ಕಪ್ ಚಾಂಪಿಯನ್ ಆಗಿದೆ.

 

 

- Advertisement -

Latest Posts

Don't Miss