Saturday, July 5, 2025

Latest Posts

ನಿಖಾತ್ ಜರೀನ್ಗೆ ವಿಶ್ವ ಚಾಂಪಿಯನ್ ಕಿರೀಟ

- Advertisement -

ಇಸ್ತಾನ್ ಬುಲ್(ಟರ್ಕಿ):ಭಾರತದ ಮಹಿಳಾ ನಿಖಾತ್ ಜರೀನ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ.

ಗುರುವಾರ ನಡೆದ ಮಹಿಳಾ 52ಕೆ.ಜಿ.ವಿಭಾಗದಲ್ಲಿ ನಿಖಾತ್, ಥಾಯ್ಲೆಂಡ್ನ ಜಿಟ್ಪೊಂಗ್ ಜುಟ್ಮಾಸ್ ವಿರುದ್ಧ 5-0  ಅಂತರದಲ್ಲಿ ಗೆಲುವು ಸಾಧಿಸಿದರು.

ತಲಾ 3 ನಿಮಿಗಷಗಳ ಮೂರು ಸುತ್ತುಗಳಲ್ಲಿ ನಿಖಾತ್ ಪ್ರಾಬಲ್ಯ ಮೆರೆದರು. ಮೂರು ಸುತ್ತುಗಳಲ್ಲಿ 5 ತೀರ್ಪುಗಾರರು ನೀಖಾತ್ ಪರ ಹೆಚ್ಚು ಅಂಕ ನೀಡಿದರು. ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ನಿಖಾತ್ ಗೆಲುವು ಕಂಡರು.

ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಭಾರತದ 5ನೇ

ಮಹಿಳಾ ಬಾಕ್ಸರ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.ದಿಗ್ಗಜ ಬಾಕ್ಸರ್ ಮೇರಿ ಕೋಮ್ 6 ಬಾರಿ ಚಾಂಪಿಯನ್

(2002,2005,2006,2008,2010,2018) ಆಗಿದ್ದರು. ಇನ್ನು ಸರಿತಾ

ದೇವಿ (2006), ಜಿನ್ನಿ ಆರ್.ಎಲ್.(2006) ಲೇಖಾ (2006) ಸಹ ಚಿನ್ನ ಗೆದ್ದಿದ್ದರು.

ನಿಖಾತ್ ಜರೀನ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದಿಸಿದ್ದಾರೆ.

 

- Advertisement -

Latest Posts

Don't Miss