ಒಂದು ಕಡೆ ಪ್ರಧಾನಿ ಮೋದಿ ಕಿಚ್ಚ ಸುದೀಪ್ ಖಡಕ್ ಮಾತಿಗೆ ಹೌದು, ಪ್ರತೀ ಭಾಷೆ ದೇಶದ ಆತ್ಮ ಅಂತ ಹೇಳಿದ್ದಾರೆ. ಕನ್ನಡದ ಹೆಮ್ಮೆ ಜಗತ್ತಿನಾದ್ಯಾಂತ ಮೆರೆದಾಡುತ್ತಿದೆ. ಹೌದು ಕನ್ನಡ ಕೆನಡಾ ತುಂಬಾ ವ್ಯತ್ಯಾಸ ಏನಿಲ್ಲ, ಕೆನಡಾ ಸಂಸತ್ತಿನಲ್ಲಿ ಕನ್ನಡಿಗ ಚಂದ್ರ ಆರ್ಯ ಮಾತೃ ಭಾಷೆಯಲ್ಲಿ ಮಾತಾಡಿದ್ರು ಇದು ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮೂಡಿಸಿತು.
೨೦೧೮ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಸಿದರು ಅಂತ ಖುಷಿಪಟ್ಟ ಚಂದ್ರ ಆರ್ಯ, ನಾನು ನನ್ನ ಮಾತೃಭಾಷೆ ೫ ಕೋಟಿ ಕನ್ನಡಿಗರ ಭಾಷೆ ಕನ್ನಡದಲ್ಲಿ ಮಾತಾಡೋಕೆ ಇಷ್ಟಪಡ್ತೀನಿ ಅಂತ ಭಾಷಣ ಆರಂಭಿಸಿದ್ರು ಕನ್ನಡದ ರಾಷ್ಟçಕವಿ ಕುವೆಂಪು ಬರೆದ ಎಲ್ಲಾದರೂ ಇರು, ಎಂತಾದರೂ ಇರು ಎಂದೆAದಿಗೂ ನೀ ಕನ್ನಡವಾಗಿರು ಅನ್ನೋ ನಾನು ಕೆನಡಾದಲ್ಲಿದ್ರು ಕನ್ನಡಿಗ ಅಂತ ಎದೆಯುಬ್ಬಿಸಿ ಮಾತಾಡಿದ್ರು. ಧನ್ಯವಾದಗಳು ಸಭಾಪತಿ ಅನ್ನೋವರೆಗೂ ಪ್ರತೀ ಪದವನ್ನೂ ಕನ್ನಡದಲ್ಲೇ ಮಾತಾಡಿದ್ರು
ಈ ಸೂರ್ಯನಂತೆ ಮಿಂಚಿದ ಚಂದ್ರನAತೆ ಕನ್ನಡದ ಕೋಟಿ ಮನಸ್ಸುಗಳಿಗೆ ತಂಪೆರೆದ ಚಂದ್ರ ಆರ್ಯ ತುಮಕೂರು ಜಿಲ್ಲೆಯ ಶಿರಾ ಗ್ರಾಮದ ದ್ವಾರಾಳು ಮೂಲದವರು. ವಾಣಿಜ್ಯ ತೆರಿಗೆ ಅಧಿಕಾರಿ ಗೋವಿಂದಯ್ಯ ಮತ್ತು ಜಯಮ್ಮ ದಂಪತಿಗಳ ಪುತ್ರ. ೧೬ ವರ್ಷಗಳ ಹಿಂದೆ ಕೆನಡಾಗೆ ಹೋಗಿರುವ ಚಂದ್ರ ಆರ್ಯ ಅಲ್ಲಿನ ಲಿಬರಲ್ ಪಕ್ಷದೊಂದಿಗೆ ಗುರುತಿಸಿಕೊಂಡರು. ಕೆನಡಾದಲ್ಲಿ ಸಂಸದರಾಗಿರೋ ಜೊತೆಗೆ ಪ್ರಸ್ತುತ ಅಂತರಾಷ್ಟಿçÃಯ ವ್ಯಾಪಾರ ಸ್ಥಾಯಿಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ೨೦೧೫ರ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್ ನೇಪಿಯನ್ ಆಗಿ ಆಯ್ಕೆಯಾಗ್ತಾರೆ.
ಕೆನಡಾದಲ್ಲಿದ್ರೂ ಕನ್ನಡಿಗನಾಗಿರುವೆ ಎಂದಿರುವ ಚಂದ್ರ ಆರ್ಯ, ಈಗಲೂ ಹಳ್ಳಿಯಲ್ಲಿ ಮನೆ ಇದೆ. ವರ್ಷಕ್ಕೆ ಎರಡು ಬಾರಿ ಬಂದು ಹೋಗ್ತಾ ರ‍್ತಾರೆ. ಇವರ ಕನ್ನಡ ಪ್ರೇಮ ಮೆಚ್ಚಿ, ಚಂದ್ರ ಆರ್ಯ ಅವರನ್ನು ಈ ವರ್ಷ ಹಾವೇರಿಯಲ್ಲಿ ನಡೆಯಲಿರೋ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಯಾಗಿ ಕರೆಯುತ್ತೇವೆ ಅಂತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಧ್ಯಕ್ಷ ಡಾ. ಮಹೇಶ್ ಜೋಷಿ ಹೇಳಿದ್ದಾರೆ.
ಓಂ, ಕರ್ನಾಟಕ ಟಿವಿ