Friday, November 14, 2025

Latest Posts

ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

- Advertisement -

ರಾಜ್ ಕೋಟ್ : ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಟಿ20 ಆವೃತ್ತಿಯಲ್ಲಿ ಅರ್ಧ ಶತಕ ಸಿಡಿಸಿದ ತಂಡದ ಹಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ನಿನ್ನೆ ರಾಜ್ ಕೋಟ್ ಅಂಗಳದಲ್ಲಿ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ 9 ಬೌಂಡರಿ 2 ಸಿಕ್ಸರ್ ಸಿಡಿಸಿ 27 ಎಸೆತದಲ್ಲಿ 55 ರನ್ ಚಚ್ಚಿದರು.

ಹಾರ್ದಿಕ್ ಹಾಗೂ ದಿನೇಶ್ ಕಾರ್ತಿಕ್ ಕೊನೆಯ 30 ಎಸೆತಗಳಲ್ಲಿ 74 ರನ್ ಚಚ್ಚಿದರು.ಇವರ ನೆರೆವಿನಿಂದ ಭಾರತ 169 ರನ್ ಗುರಿ ನೀಡಿತು.

ವಿಶೇಷವೆಂದರೆ 16 ವರ್ಷಗಳ ನಂತರ ಟಿ20 ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ದಿನೇಶ್ ಕಾರ್ತಿಕ್ ಅರ್ಧ ಶತಕ ಸಿಡಿಸಿದ್ದಾರೆ.

37 ವರ್ಷದ ಕಾರ್ತಿಕ್ ಟಿ20ಯಲ್ಲಿ ಅರ್ಧ ಶತಕ ಸಿಡಿಸಿದ ತಂಡದ ಅತಿ ಹಿರಿಯ ಆಟಗಾರ ಎನಿಸಿದ್ದಾರೆ. ಈ ಹಿಂದೆ 2018ರಲ್ಲಿ ಧೋನಿ ಇದೇ ದ.ಆಫ್ರಿಕಾ ವಿರುದ್ಧ ಅರ್ಧ ಶತಕ ಸಿಡಿಸಿದ್ದರು.

ಅಂದು ಧೋನಿಗೆ 36 ವರ್ಷ ವಯಸ್ಸಾಗಿತ್ತು. 2020ರಲ್ಲಿ 35 ವರ್ಷದ ಶಿಖರ್ ಧವನ್ ಅರ್ಧ ಶತಕ ಸಿಡಿಸಿದರು.

- Advertisement -

Latest Posts

Don't Miss