ಹೊಸದಿಲ್ಲಿ: ಸಂಘಟಿತ ದಾಳಿ ನಡೆಸಿದ ಮಧ್ಯ ಪ್ರದೇಶ ತಂಡ ಫೈನಲ್‍ನಲ್ಲಿ ಮೊದಲ ದಿನ ಮುಂಬೈ ವೇಗಕ್ಕೆ ಕಡಿವಾಣ ಹಾಕಿದೆ.
ಬುಧವಾರ ಚಿನ್ನಸ್ವಾಮಿ ಅಂಗಳದಲ್ಲಿ ಆರಂಭವಾದ ರಣಜಿ ಟೂರ್ನಿಯ ಅಂತಿಮ ಕದನದಲ್ಲಿ ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ದಿನ ಮುಂಬೈ ತಂಡ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ.
ಮೊದಲ ಇನ್ನಿಂಗ್ಸ್‍ನಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಲು ರ್ಸಾರಾಜ್ ಖಾನ್ ಹಾಗೂ ಶಾಮ್ಸ್ ಮುಲಾನಿ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ.
ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಪೃಥ್ವಿ ಶಾ ಹಾಗು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‍ಗೆ 87 ರನ್ ಸೇರಿಸಿದರು. 47 ರನ್ ಗಳಿಸಿ ಮುನ್ನಗುತ್ತಿದ್ದ ನಾಯಕ ಪೃಥ್ವಿ ಶಾ ವೇಗಿ ಅನುಭವ್ ಅಗರ್‍ವಾಲ್ ಎಸೆತದಲ್ಲಿ ಬೌಲ್ಡ್ ಆದರು.
ಉತ್ತಮ ಆರಂಭದ ಹೊರತಾಗಿಯೂ ನಂತರ ಮುಂಬೈ ತಂಡ ಪಿಚ್‍ನ ಲಾಭ ಪಡೆಯುವಲ್ಲಿ ವಿಫಲವಾಯಿತು.
ಮೂರನೆ ಕ್ರಮಾಂಕದಲ್ಲಿ ಬಂದ ಅರ್ಮಾನ್ ಜಾಫರ್ 3 ಬೌಂಡರಿ ಹೊಡೆದು 26 ರನ್ ಗಳಿಸಿದ್ದಾಗ ಸ್ಪಿನ್ನರ್ ಕಾರ್ತಿಕ್‍ಯೇಯಾ ಎಸೆತದಲ್ಲಿ ಯಶ್ ದುಬೆಗೆ ಕ್ಯಾಚ್ ನೀಡಿ ಹೊರ ನಡೆದರು.
ಎರಡನೆ ಅವಯಲ್ಲಿ ಪಿಚ್ ಸಹಕರಿಸದ ಕಾರಣ ಮುಂಬೈ ಬ್ಯಾಟರ್‍ಗಳು ರನ್ ಗಳಿಸಲು ಪರದಾಡಿದರು. ಸುವೇದ್ ಪಾರ್ಕರ್ 18 ರನ್ ಗಳಿಸಿ ಸಾರಾನ್ಶ್ ಜೈನ್‍ಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ತಾಮೋರ್ 24 ರನ್ ಗಳಿಸಿ ಸಾರಾನ್ಶ್‍ಗೆ ಬಲಿಯಾದರು.
ಸರ್ಫಾರಾಜ್ ಖಾನ್ 125 ಎಸೆತ ಎದುರಿಸಿ 3 ಬೌಂಡರಿಯೊಂದಿಗೆ ಅಜೇಯ 40 ರನ್ ಹಾಗೂ ಶಾಮ್ಸ್ ಮುಲಾನಿ 43 ಎಸೆತ ಎದುರಿಸಿ 1 ಬೌಂಡರಿಯೊಂದಿಗೆ ಅಜೇಯ 12 ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮುಂಬೈ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ. ಸಾರಾನ್ಶ್ ಜೈನ್ ಹಾಗೂ ಅನುಭವ್ ಅಗರ್‍ವಾಲ್ ತಲಾ 2 ವಿಕೆಟ್ ಪಡೆದರು. ಕುಮಾರ್ ಕಾರ್ತಿಕ್‍ಯೇಯಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಮೊದಲ ಇನ್ನಿಂಗ್ಸ್ 248/5
ಯಶಸ್ವಿ ಜೈಸ್ವಾಲ್ 78, ಪೃಥ್ವಿ ಶಾ 47
ಅನುಭವ್ ಅಗರ್‍ವಾಲ್ 2, ಸಾರಾನ್ಶ್ ಜೈನ್ 2 ವಿಕೆಟ್

