ಕೇಕ್ ಕತ್ತರಿಸಿ, ಪಾರ್ಟಿ ಮಾಡಿ, ಹಲವರು ತಮ್ಮ ಬರ್ತ್‌ಡೇನಾ ಸೆಲೆಬ್ರೇಟ್ ಮಾಡ್ತಾರೆ. ಆದ್ರೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ತಮ್ಮ ಹುಟ್ಟುಹಬ್ಬವನ್ನ ಡಿಫ್ರೆಂಟ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಸಿದ್ಧಲಿಂಗಪುರದ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ ಹೇಮಂತ್ ಗೌಡ, ಅಲ್ಲಿನ ಎಲ್ಲಾ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಹೇಮಂತ್‌ಗೌಡ, ಪೌರಕಾರ್ಮಿಕರಿಂದಲೇ ನಾವೆಲ್ಲ ಇಷ್ಚು ಆರೋಗ್ಯವಂತರಾಗಿರುವುದು. ಅವರು ಕಸವನ್ನ ತೆಗೆದು ಕ್ಲೀನ್ ಮಾಡುವುದರಿಂದಲೇ, ನಾವು ಇಷ್ಟು ಆರಾಮವಾಗಿರಲು ಸಾಧ್ಯವಾಗಿದೆ. ಕೊರೊನಾ ಸಮಯದಲ್ಲೂ ಕೂಡ ಅವರ ಕೆಲಸ ಶ್ಲಾಘನೀಯವಾದ್ದದ್ದು, ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳು ಅಂತಾ ಹೇಳಿದರು.
ಅಲ್ಲದೇ, ಪೌರ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಲು ಆದಷ್ಟು ಪ್ರಯತ್ನ ಪಡುತ್ತೇನೆ. ಸರ್ಕಾರದ ಪ್ರತಿನಿಧಿಯಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಕೊರೊನಾ ಸಮಯದಲ್ಲಿ ನಿಮ್ಮ ಕೆಲಸವನ್ನು ಹತ್ತಿರದಿಂದ ನೋಡಿದ್ದು, ನಿಜಕ್ಕೂ ನಿಮ್ಮ ಕಾರ್ಯ ಪ್ರಶಂಸನೀಯವಾಗಿದೆ ಎಂದು ಹೇಮಂತ್‌ಕುಮಾರ್ ಹೇಳಿದರು.
ಇನ್ನು ಮೈಸೂರಿನ ಕೆಆರ್‌ಎಸ್ ರಸ್ತೆಯ ಇ ಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿದ ಹೇಮಂತ್‌ಕುಮಾರ್, 6 ತೊಟ್ಟಿಲನ್ನ ಕೊಡುಗೆಯಾಗಿ ನೀಡಿದರು. ಅಲ್ಲದೇ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಬಟ್ಟೆ ವಿತರಣೆ ಮಾಡಿ, ಅಲ್ಲಿನ ಸಿಬ್ಬಂದಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದರು. ಅಲ್ಲದೇ ಹೇಮಂತ್ ಕುಮಾರ್ ಕಚೇರಿಗೆ ಬಿಜೆಪಿ ಸದಸ್ಯರು ಮತ್ತು ಅವರ ಬೆಂಬಲಿಗರು ಆಗಮಿಸಿ, ಹೂಗುಚ್ಛ ನೀಡಿ, ಹುಟ್ಟುಹಬ್ಬದ ಶುಭಾಶಯ ಕೋರಿದರು. ಹೀಗೆ ಹೇಮಂತ್ ಕುಮಾರ್ ಅರ್ಥಪೂರ್ಣವಾದ ಹುಟ್ಟುಹಬ್ಬ ಆಚರಣೆ ಮಾಡಿದರು.