Friday, July 4, 2025

Latest Posts

ನಾಯಕ ರೋಹಿತ್ ಶರ್ಮಾಗೆ ಕೊರೋನಾ

- Advertisement -

ಲಂಡನ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ಸೋಂಕಿಗೆ ಗುರಿಯಾಗಿದ್ದು ಆಘಾತ ನೀಡಿದೆ. ಸರಣಿ ರದ್ದಾಗುವ ಭೀತಿಯಲ್ಲಿದೆ.

ಟೆಸ್ಟ್ ಪಂದ್ಯ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದು ಮತ್ತು ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಶನಿವಾರ ನಡೆಸಿದ ರಾಪಿಡ್ ಟೆಸ್ಟ್ ನಂತರ ಕೋವಿಡ್ ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ. ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಹೋಟೇಲ್ ನಲ್ಲಿ ಐಸೋಲೇಶನ್ ಆಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೈಕೆಯಲ್ಲಿದೆ ಎಂದು ಪೋಸ್ಟ್ ಮಾಡಿದೆ.

ರೋಹಿತ್ ಶರ್ಮಾ ಮೊನ್ನೆ ಅಭ್ಯಾಸ ಪಂದ್ಯದ ಎರಡನೆ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ.

ಇಂಗ್ಲೆಂಡ್ ವಿರುದ್ಧ ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಎಡ್ಜ್ ಬಾಸ್ಟನ್ ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ವೇಳೆಗೆ ನಾಯಕ ರೋಹಿತ್ ಚೇತರಿಸಿಕೊಂಡರೆ ವಿದೇಶದಲ್ಲಿ ನಾಯಕನಾಗಿ ಆಡುವದರಿಂದ ಅವರಿಗೆ ಮೊದಲ ಪಂದ್ಯವಾಗಲಿದೆ.

- Advertisement -

Latest Posts

Don't Miss