Monday, December 23, 2024

Latest Posts

ಆಂಗ್ಲರ ಮೇಲೆ ಬಿಗಿ ಹಿಡಿತ ಸಾಸಿದ ಭಾರತ :4 ವಿಕೆಟ್ ಪಡೆದು ಮಿಂಚಿದ ಮೊಹ್ಮದ್ ಸಿರಾಜ್

- Advertisement -

ಬರ್ಮಿಂಗ್‍ಹ್ಯಾಮ್: ಮೊಹ್ಮದ ಸಿರಾಜ್ (66ಕ್ಕೆ 4)ಅವರ ಅತ್ಯದ್ಬುತ ಬೌಲಿಂಗ್  ನೆರೆವಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಬಿಗಿ ಹಿಡಿತ ಸಾಸಿದೆ.

ಭಾನುವಾರ ನಡೆದ ಮೂರೆನೆ ದಿನದಾಟದ ಪಂದ್ಯದಲ್ಲಿ  ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ತಂಡ 284 ರನ್ ಗಳಿಗೆ ಸರ್ವಪತನ ಕಂಡಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಭಾರತ 125 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.ಒಟ್ಟು 257 ರನ್ ಗಳ ಮುನ್ನಡೆ ಪಡೆದು ಸುಸ್ಥತಿಯಲ್ಲಿದೆ.

ಬ್ಯಾಟಿಂಗ್ ಮುಂದುವರೆಸಿದ ಜಾನಿ ಬೈರ್‍ಸ್ಟೊ ಹಾಗೂ ನಾಯಕ ಬೆನ್ ಸ್ಟೋಕ್ಸ್  ಉತ್ತಮ ಆರಂಭ ಕೊಡುವಲ್ಲಿ ಎಡವಿದರು.  25 ರನ್ ಗಳಿಸಿದ್ದ ಸ್ಟೋಕ್ಸ್ ವೇಗಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ  ಬುಮ್ರಾಗೆ ಕ್ಯಾಚ್ ನೀಡಿ ಹೊರ ನಡೆದರು.

ಶತಕ ಸಿಡಿಸಿ ತಂಡವನ್ನು ಕಾಪಾಡಿದ ಭೈರ್ ಸ್ಟೊ

ಎಂಟನೆ ಕ್ರಮಾಂಕದಲ್ಲಿ ಬಂದ ಸ್ಯಾಮ್ ಬಿಲ್ಲಿಂಗ್ಸ್ , ಬೈರ್‍ಸ್ಟೋಗೆ ಒಳ್ಳೆಯ ಸಾಥ್ ಕೊಟ್ಟರು. ಈ ಜೋಡಿ ಏಳನೆ ವಿಕೆಟ್‍ಗೆ 92 ರನ್‍ಗಳ ಜೊತೆಯಾಟ ನೀಡಿ ತಂಡದ ಕುಸಿತವನ್ನು ತಡೆದರು.

ಸ್ಯಾಮ್ ಬಿಲ್ಲಿಂಗ್ಸ್ ಬೆಂಬಲ ಪಡೆದ ಜಾನಿ ಭೈರ್ ಸ್ಟೋ  ಬಿರುಸಿನ ಬ್ಯಾಟಿಂಗ್ ಮಾಡಿ 119 ಎಸೆತದಲ್ಲಿ ಶತಕ ಪೂರೈಸಿದರು. ಟೆಸ್ಟ್ ಕ್ರಿಕೆಟ್‍ನಲ್ಲಿ 11ನೇ ಶತಕ ಪೂರೈಸಿದ ಸಾಧನೆ ಮಾಡಿದರು.

ಇನ್ನೇನು ಆಂಗ್ಲರು ಮೇಲಗೈ ಸಾಸುವತ್ತ ಮುನ್ನುಗುತ್ತಿದ್ದಾಗ  ಮತ್ತೆ ದಾಳಿಗಿಳಿದ ಮೊಹ್ಮದ್  ಸಿರಾಜ್ 106 ರನ್ ಗಳಿಸಿದ್ದ  ಜಾನಿ ಬೈರ್ ಸ್ಟೋ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು. ಜಾನಿ ಭೈರ್ ಸ್ಟೋ  ಒಟ್ಟು 140 ಎಸೆತ ಎದುರಿಸಿ  14 ಬೌಂಡರಿ  2 ಸಿಕ್ಸರ್ ಸಿಡಿಸಿದರು.

ಕೊನೆಯ 43 ರನ್‍ಗಳ ಅಂತರದಲ್ಲಿ  3 ವಿಕೆಟ್ ಪತನವಾದವು. ಸ್ಟುವರ್ಟ್ ಬ್ರಾಡ್  ಸಿರಾಜ್ ಎಸೆತದಲ್ಲಿ  ರಿಷಬ್ ಪಂತ್‍ಗೆ ಕ್ಯಾಚ್ ಕೊಟ್ಟರು.  ನಂತರ 36 ರನ್ ಗಳಿಸಿದ್ದ  ಸ್ಯಾಮ್ ಬಿಲ್ಲಿಂಗ್ಸ್ ಸಿರಾಜ್ ಎಸೆತದಲ್ಲಿ ಬೌಲ್ಡ್ ಆದರು.  ಮ್ಯಾಥೀವ್ ಪಾಟ್ಸ್ 19 ರನ್ ಗಳಿಸಿ ಶ್ರೇಯಸ್ ಅಯ್ಯರ್‍ಗೆ ಕ್ಯಾಚ್ ನೀಡಿದರು. ಭಾರತ ಒಟ್ಟು  132 ರನ್ ಗಳ ಮುನ್ನಡೆ ಪಡೆಯಿತು.

ಭಾರತ ಪರ ಮೊಹ್ಮದ್ ಸಿರಾಜ್ 66ಕ್ಕೆ 4, ನಾಯಕ ಜಸ್ಪ್ರೀತ್ ಬುಮ್ರಾ 68ಕ್ಕೆ3, ಮೊಹ್ಮದ್ ಶಮಿ 78ಕ್ಕೆ 2,  ಶಾರ್ದೂಲ್ ಠಾಕೂರ್ 48ಕ್ಕೆ 1 ವಿಕೆಟ್ ಪಡೆದರು.

ಭಾರತಕ್ಕೆ ಆರಂಭಿಕ ಆಘಾತ

ಎರಡನೆ ಇನ್ನಿಂಗ್ಸ್ ಆರಂಭಿಸಿದ ಭಾರತ  ತಂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (4 ರನ್)ವೇಗಿ ಆ್ಯಂಡರ್ಸನ್ ಎಸೆತದಲ್ಲಿ ಕ್ರೌವ್ಲಿಗೆ ಕ್ಯಾಚ್ ನೀಡಿದರು. ನಂತರ ಬಂದ ಹನುಮ ವಿಹಾರಿ ಕೂಡ ಹೆಚ್ಚು ಹೊತ್ತು ನಿಲ್ಲದೆ  11 ರನ್ ಗಳಿಸಿದ್ದಾಗ ವೇಗಿ ಬ್ರಾಡ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಪೂಜಾರ ಜೊತೆಗೂಡಿದ ವಿರಾಟ್ ಕೊಹ್ಲಿ ತಂಡದ ಕುಸಿತವನ್ನು ತಡೆದರು. ಆದರೆ 20 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಸ್ಟೋಕ್ಸ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಿಷಬ್ ಪಂತ್ ವಿಕೆಟ್ ಬೀಳದಂತೆ ನೋಡಿಕೊಂಡರು.

ಚೇತೇಶ್ವರ ಪೂಜಾರ ಅಜೇಯ 50 ರನ್, ರಿಷಬ್ ಪಂತ್ ಅಜೇಯ 30 ರನ್ ಗಳಿಸಿ ನಾಲ್ಕನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡರು. ಶತಕ ಸಿಡಿಸಿ ಸೇಡು ತೀರಿಸಿಕೊಂಡ ಬೈರ್‍ಸ್ಟೊ

ಭಾರತ ವಿರುದ್ಧ ಶತಕ ಸಿಡಿಸಿ ಜಾನಿ ಭೈರ್‍ಸ್ಟೊ ಸೇಡು ತೀರಿಸಿಕೊಂಡಿದ್ದಾರೆ. ಮೊನ್ನೆ ಎರಡನೆ ದಿನದಾಟದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಜಾನಿ ಭೈರ್ ಸ್ಟೊ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತಿನ ಚಕಮಕಿ ನಡೆಸಿದ್ದರು.

ಇದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮೂರನೆ ದಿನದಾಟದ ಪಂದ್ಯದಲ್ಲಿ ಶತಕ ಸಿಡಿಸಿ ಭೈರ್ ಸ್ಟೊ, ವಿರಾಟ್ ವಿರುದ್ಧ ಸೇಡು ತೀರಿಸಿಕೊಂಡರು ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ.

 

 

 

 

- Advertisement -

Latest Posts

Don't Miss