Friday, October 18, 2024

Latest Posts

ರಾಮಲಿಂಗಾರೆಡ್ಡಿ ಜೊತೆ ಸಂಧಾನ ಸಕ್ಸಸ್ – ಬಿಜೆಪಿ ಪ್ಲಾನ್ ಠುಸ್..!?

- Advertisement -

ಬೆಂಗಳೂರು : ರಾಜ್ಯ ರಾಜಕೀಯ ಕ್ಷಿಪ್ರಕ್ರಾಂತಿಯಲ್ಲಿ ಕ್ಷಣಕ್ಕೊಂದು ಬೆಳವಣಿಗೆ ಬದಲಾಗ್ತಾನೆ ಇದೆ.. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ್ದ ಪ್ರಭಾವಿ ಶಾಸಕ ರಾಮಲಿಂಗಾರೆಡ್ಡಿ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಸಂಧಾನಕ್ಕೆ ಮಣಿದಿದ್ದಾರೆ.. ರಾಜ್ಯ ಕಾಂಗ್ರೆಸ್ ನಲ್ಲಿನ ಮಹಾ ಬಿಕ್ಕಟ್ಟನ್ನು ಪರಿಹರಿಸಲು ಬೆಂಗಳೂರಿಗೆ ಆಗಮಿಸಿರುವ ಗುಲಾಂ ನಬಿ ಆಜಾದ್ ಕೆ.ಕೆ ಗೆಸ್ಟ್ ಹೌಸ್ ನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿ ದೂರವಾಣೀ ಮೂಲಕ ರಾಮಲಿಂಗಾರೆಡ್ಡಿಯವರನ್ನ ಸಂಪರ್ಕಿಸಿ ಮಾತುಕತೆ ನಡೆಸಿದ್ರು.. ಈ ವೇಳೆ ರಾಮಲಿಂಗಾರೆಡ್ಡಿವರ ಜೊತೆ ದೀರ್ಘ ದೂರವಾಣಿ ಸಂಭಾಷಣೆ ನಡೆಸಿದ ಗುಲಾಂ ನಬಿ ಆಜಾದ್ ಸಂಪೂರ್ಣವಾಗಿ ರಾಮಲಿಂಗಾರೆಡ್ಡಿಯವರ ಮಾತನ್ನ ಆಲಿಸಿದ್ರು ಅಲ್ಲದೇ ರಾಮಲಿಂಗಾರೆಡ್ಡಿಯವರ ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಒಪ್ಪಿಕೊಂಡ್ರು..!

ರಾಮಲಿಂಗಾರೆಡ್ಡಿ ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು..?

ಇನ್ನು ರಾಮಲಿಂಗಾರೆಡ್ಡಿಯವು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ವಿರುದ್ಧ ದೂರಿನ ಸರಮಾಲೆಯನ್ನೇ ಹೇಳಿದ್ರು ಅಲ್ಲದೇ ತನ್ನನ್ನ ರಾಜ್ಯ ದೋಸ್ತಿ ಸರ್ಕಾರದವರು ಹೇಗೆ ಕಡೆಗಣಿಸಿದ್ರು ಅನ್ನೋದನ್ನ ಎಳೆಎಳೆಯಾಗಿ ಬಿಡಿಸಿಟ್ರು. ರಾಮಲಿಂಗಾರೆಡ್ಡಿ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಅಸ್ತು ಅಂದ್ರು ಆದ್ರೆ ರೋಷನ್ ಬೇಗ್ ಮೇಲಿನ ಅಮಾನತು ವಾಪಸ್ ಪಡೆಯುವಂತೆ ರಾಮಲಿಂಗಾರೆಡ್ಡಿ ಮುಂದಿಟ್ಟ ಬೇಡಿಕೆಯನ್ನ ಸಿದ್ದರಾಮಯ್ಯ ಸುತಾರಾಂ ಒಪ್ಪಲಿಲ್ಲ. ಆದ್ರೆ ರಾಮಲಿಂಗಾರೆಡ್ಡಿ ತಮ್ಮ ಬೇಡಿಕೆಯನ್ನ ಸಡಿಲಿಸಲಿಲ್ಲ. ಆಗ ಗುಲಾಂ ನಬಿ ಆಜಾದ್ ರೋಷನ್ ಬೇಗ್ ಮೇಲಿನ ಅಮಾನತು ವಾಪಸ್ ಪಡೆಯುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ರು. ನಂತರ ಯಶವಂತ ಪುರ ಶಾಸಕ ಎಸ್.ಟಿ ಸೋಮಶೇಖರ್, ಕೆ.ಆರ್ ಪುರಂ ನ ಭೈರತಿ ಬಸವರಾಜ್, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ ಅವರನ್ನ ಮನವೊಲಿಸಲು ರಾಮಲಿಂಗಾರೆಡ್ಡಿಗೆ ಕೋರಲಾಯ್ತು. ಇದೇ ವೇಳೆ ಅವರ ಬೇಡಿಕೆಗಳು ಬಹಳಷ್ಟಿದೆ, ಅವರಿಗೂ ದೋಸ್ತಿ ಸರ್ಕಾರದ ನಡವಳಿಕೆಯಿಂದ ಬಹಳ ನೋವಾಗಿದೆ. ಹೀಗಾಗಿ ಅವರನ್ನ ನಾನು ಸಾಧ್ಯವಾದಷ್ಟು ಕನ್ವೆನ್ಸ್ ಮಾಡುತ್ತೇನೆ ಆದ್ರೆ ಸ್ಪಷ್ಟವಾಗಿ ಏನನ್ನ ನಾನು ಹೇಳಲು ಆಗಲ್ಲ ಅಂತ ರಾಮಲಿಂಗಾರೆಡ್ಡಿ ಗುಲಾಂ ನಬಿ ಆಜಾದ್ ಗೆ ಹೇಳಿದ್ದಾರೆ.. ದೂರವಾಣಿ ಸಂಧಾನ ಸಕ್ಸಸ್ ಗೆ ಸುಮ್ಮನಾಗದ ಗುಲಾಂ ನಬಿ ಆಜಾದ್ ರಾಮಲಿಂಗಾರೆಡ್ಡಿಯವರನ್ನ ಮುಖಾಮುಖಿ ಭೇಟಿಯಾಗಿ ಮನವೊಲಿಸಲು ನಿರ್ಧರಿಸಿದ್ದಾರೆ.. ಆದ್ರೆ ರಾಮಲಿಂಗಾರೆಡ್ಡಿ ಇನ್ನೂ ಸಹ ಮುಖಾಮುಖಿಯಾಗಿ ಭೇಟಿಯಾಗಿ ಸಂಧಾನಕ್ಕೆ ಕೂರಲು ಮನಸ್ಸು ಮಾಡಿಲ್ಲ..

ರಾಮಲಿಂಗಾರೆಡ್ಡಿ ರೆಡ್ಡಿ ರಾಜಿಯಿಂದ ಬಿಜೆಪಿ ಕಂಗಾಲು..!

ಇನ್ನು ರಾಮಲಿಂಗಾರೆಡ್ಡಿ ಪ್ರಾಥಮಿಕ ಸಂಧಾನ ಹೈಕಮಾಂಡ್ ಜೊತೆ ಸಕ್ಸಸ್ ಆಗಿದೆ.. ದಿಉ ಬಿಜರೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ ಯಾಕಂದ್ರೆ ರಾಮಲಿಂಗಾರೆಡ್ಡಿಯ ನಿರ್ಧಾರವೇ ನಮ್ಮ ನಿರ್ಧಾರ ಅಂತ ಭೈರತಿ ಬಸವರಾಜ್, ಸೋಮಶೇಖರ್, ಮುನಿರತ್ನ ಎಲ್ಲಿ ರಾಜೀನಾಮೆಯನ್ನ ವಾಪಸ್ ಪಡೆದು ಬಿಡ್ತಾರೋ ಅನ್ನೋ ಆತಂಕ ಬಿಜೆಪಿ ನಾಯಕರನ್ನ ಕಾಡ್ತಿದೆ..

ಯಸ್ ವೀಕ್ಷಕರೇ ರಾಮಲಿಂಗಾರೆಡ್ಡಿ ರಾಜೀನಾಮೆಯನ್ನ ವಾಪಸ್ ಪಡೀಬೇಕಾ..? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ..

https://www.youtube.com/watch?v=1rmliZrbuKU
- Advertisement -

Latest Posts

Don't Miss