ಬೆಂಗಳೂರು : ರಾಜ್ಯ ರಾಜ್ಯಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ಆಗ್ತಿದೆ. ಕುಮಾರಸ್ವಾಮಿ ಅಮೆರಿಕಾ ಪ್ರವಾಸ ಮುಗಿಸಿ ರಾಜ್ಯಕ್ಕೆ ಕಾಲಿಡುವ ವೇಳೆಗೆ ಸರ್ಕಾರದಲ್ಲಿ ಅಲ್ಲಲ ಕಲ್ಲೋಲ ಹೋಗಿತ್ತು. ತಕ್ಷಣ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿ ಎಲ್ಲಾ ಸಚಿವರ ರಾಜೀನಾಮೆ ಪಡೆದ್ರು. ಕಾಂಗ್ರೆಸ್ ಮುಖಂಡರು ಸಹ ಸಚಿವರ ರಾಜೀನಾಮೆಯನ್ನ ಕನ್ಫರ್ಮ್ ಮಾಡಿದ್ರು. ಕಾಂಗ್ರೆಸ್ ಸಚಿವರು ರಾಜೀನಾಮೆ ಕೊಟ್ಟರೂ ಕೂಡ ಜೆಡಿಎಸ್ ನವರು ಯಾಕೆ ಕೊಡಲಿಲ್ಲ ಎನ್ನುವ ಪ್ರಶ್ನೆ ಎದುರಾದಾಗ ಅದಾಗಲೇ ಜೆಡಿಎಸ್ ಸಚಿವರು ರಾಜೀನಾಮೆ ನೀಡಿದ್ದಾರೆ ಅಂತ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಘೋಷಣೆ ಮಾಡಿದ್ರು.
ಸಚಿವರು ರಾಜೀನಾಮೆ ಕೊಟ್ಟಿಲ್ಲ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ
ಇನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಂತರ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸತ್ಯವನ್ನ ಬಾಯ್ಬಿಟ್ರು. ನೀವು ಕುಮಾರಸ್ವಾಮಿ ಬಿಟ್ಟು ಎಲ್ರೂ ರಾಜೀನಾಮೆ ಕೊಟ್ಟಿದ್ದಾರೆ. ಸಚಿವರ್ಯಾರು ಇಲ್ಲ ಅಂತ ಸುದ್ದಿ ಹಾಕ್ತಿರಲ್ಲ, ನೋಡ್ರಪ್ಪ ಸಚಿವರು ರಾಜಜೀನಾಮೆ ಕೊಟ್ಟಿದ್ದಾರೆ ಆದ್ರೆ ಅದು ಅಂಗೀಕಾರ ಆಗಿಲ್ಲ ಸಚಿವರು ಇನ್ನು ಸಚಿರಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಅಂತ ಲಾಜಿಕ್ ಲೆಕ್ಕಾಚಾರವನ್ನ ಸಿದ್ದು ಬಿಚ್ಚಿಟ್ರು.
ಭಿನ್ನಮತೀಯ ಶಾಸಕರನ್ನ ಸೆಳೆಯಲು ಸಚಿವರ ರಾಜೀನಾಮೆ ಡ್ರಾಮಾ..!
ಇನ್ನು ರಾಜೀನಾಮೆ ಕೊಟ್ಟಿರುವ ಶಾಸಕರನ್ನ ಸೆಳೆಯಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ರಾಜೀನಾಮೆ ನಾಟಕ ಮಾಡಿದ್ರು ಅನ್ನೋದು ಇದೀಗ ಸ್ಪಷ್ಟವಾಗಿದೆ. ಇನ್ನೊಂದೆಡೆ ರಾಜೀನಾಮೆ ಕೊಟ್ಟವರು ವಾಪಸ್ ಬನ್ನಿ ಇಲ್ಲ ಅನರ್ಹ ಮಾಡಲು ಸ್ಪೀಕರ್ ಗೆ ದೂರು ಕೊಡ್ತೇವೆ ಅಂತ ಕಾಂಗ್ರೆಸ್ ನಿಯೋಗ ಸ್ಪೀಕರ್ ಗೆ ಈಗಾಗಲೇ ದೂರು ನೀಡಿದ್ದಾರೆ. ಇಷ್ಟಾದರೂ ಮುಂಬೈ ನಲ್ಲಿರುವ ರಾಜೀನಾಮೆ ನೀಡಿರುವ ಶಾಸಕರು ನೀವು ಏನೇ ಮಾಡಿದ್ರು ನಾವು ರಾಜೀನಾಮೆ ವಾಪಸ್ ಪಡೆಯಲ್ಲ ಅಂತ ದೋಸ್ತಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ನಿಮ್ಮ ಪ್ರಕಾರ ದೋಸ್ತಿ ಸರ್ಕಾರ ಉಳಿಯಬೇಕಾ..? ಅಥವಾ ಉರುಳಬೇಕಾ.? ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ.
ದೇವೇಗೌಡ ಪುತ್ರನ ಸರ್ಕಾರಕ್ಕೆ ಸಂಕಷ್ಟ..! ಮಿಸ್ ಮಾಡದೇ ಈ ವಿಡಿಯೋ ನೋಡಿ