BREAKING NEWS: ಚಂದ್ರಶೇಖರ್ ಗುರೂಜಿ ಹತ್ಯೆಗೈದಿದ್ದ ಇಬ್ಬರು ಹಂತಕರು ಅರೆಸ್ಟ್

ಹುಬ್ಬಳ್ಳಿ: ಇಂದು ಸರಳವಾಸ್ತು ಮೂಲಕ ಖ್ಯಾತಿಯಾಗಿದ್ದಂತ ಚಂದ್ರಶೇಖರ ಗುರೂಜಿಯನ್ನು ಹುಬ್ಬಳ್ಳಿಯ ಹೋಟೆಲ್ ಬಳಿಯಲ್ಲಿ ಹತ್ಯೆಗೈಯ್ಯಲಾಗಿತ್ತು. ಹೀಗೆ ಕೊಲೆ ಮಾಡಿದ್ದಂತ ಇಬ್ಬರು ಹಂತಕರನ್ನು, ಕೊಲೆಯಾದಂತ ನಾಲ್ಕು ಗಂಟೆಯಲ್ಲಿಯೇ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಸರಳವಾಸ್ತು ಚಂದ್ರಶೇಖರ ಗುರೂಜಿಯನ್ನು ಇಂದು ಕಾಲಿಗೆ ಬಿದ್ದು ನಮಸ್ಕರಿಸೋ ಸೋಗಿನಲ್ಲಿ ಇಬ್ಬರು ಹಂತಕರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಕೇವಲ 60 ಸೆಕೆಂಡ್ ನಲ್ಲಿಯೇ 40 ಬಾರಿ ಚಾಕುವಿನಿಂದ ಇರಿದಿದ್ದರಿಂದ ಚಂದ್ರಶೇಖರ ಗುರೂಜಿ ಸ್ಥಳದಲ್ಲಿಯೇ ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿದ್ದರು. ಕೊಲೆ ಹಂತಕರು ಅಲ್ಲಿಂದ ಪರಾರಿಯಾಗಿದ್ದರು.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಂತ ಪೊಲೀಸರು, 5 ತಂಡಗಳಲ್ಲಿ ಕೊಲೆ ಆರೋಪಿಗಳ ಪತ್ತೆಗೆ ಇಳಿದಿದ್ದರು. ವಿವಿಧ ಟೆಕ್ನಿಕಲ್ ಮಾಹಿತ ಅನುಸಾರ ಇದೀಗ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಮಹಂತೇಶ್ ಹಾಗೂ ಮಂಜುನಾಥ್ ಎನ್ನುವಂತ ಇಬ್ಬರು ಆರೋಪಿಗಳನ್ನು ಕೊಲೆ ಮಾಡಿದ್ದಂತ ಕೇವಲ 4 ಗಂಟೆಯಲ್ಲೇ ಬಂಧಿಸಿದ್ದಾರೆ.

ಗುರೂಜಿ ಹುಬ್ಬಳ್ಳಿಗೆ ಬಂದಿದ್ದಾರು ಯಾಕೆ ಗೊತ್ತಾ?

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ – ಆಪ್ತನ ಪತ್ನಿ ಅರೆಸ್ಟ್

ಚಂದ್ರಶೇಖರ್ ಗುರೂಜಿಯವರ ಕೊಲೆಗೆ ಕಾರಣವೇನು?

ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಭೀಕರ ಹತ್ಯೆ

About The Author