ಕೋಲ್ಕತ್ತಾ: ಕಾಳಿ ದೇವಿಯು ಮಾಂಸ ಮತ್ತು ಮಧ್ಯ ಸೇವಿಸುವ ದೇವತೆಯಾಗಿದ್ದಾಳೆ ಎಂದು ಟಿಎಂಸಿಯ ಸಂಸದೆ ಮಹುವಾ ಮೊಹಿತ್ರಾ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವುದನ್ನು ತೋರಿಸುವ ಚಿತ್ರದ ಪೋಸ್ಟರ್ ವಿವಾದಕ್ಕೆ ಪ್ರತಿಕ್ರಿಯಿಸಿದರು. ಅವರವರ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ಅವರವರಿಗೆ ಇರುತ್ತದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಹಾಗೂ ಇನ್ನೂ ಕೆಲವು ಸ್ಥಳಗಳಲ್ಲಿ ಧರ್ಮದ ನಿಂದನೆ ಆಗಿರುತ್ತದೆ ಎಂದು ತಿಳಿಸಿದರು.
ಅದಕ್ಕೆ ಉದಾಹರಣೆ ಎಂಬಂತೆ ಸಿಕ್ಕಿಂನಲ್ಲಿ ಕಾಳಿ ದೇವಿಗೆ ವಿಸ್ಕಿಯನ್ನು ನೀಡುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ವಿಸ್ಕಿಯನ್ನು ಪ್ರಸಾದ ಎಂದು ಹೇಳಿದರೆ ಅವರು ಅದನ್ನು ಪ್ರಸಾದ ಎಂದರೆ ಧರ್ಮ ನಿಂದನೆ ಆಗುತ್ತದೆ ಎಂದರು.
ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.