ಬಾಲಿವುಡ್‌ನ ಕ್ಯೂಟ್ ಜೋಡಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇತ್ತೀಚಿಗೆ ಅಭಿಮಾನಿಗಳಿಗೆ ಗುಡ್ ನ್ಯೂಸೊಂದನ್ನ ಕೊಟ್ಟಿದ್ರು. ಅದುವೇ ನಟಿ ಆಲಿಯಾ ಭಟ್ ಗರ್ಭಿಣಿ ಆಗಿರೋ ವಿಷಯ. ಮದುವೆಯಾದ ಎರಡು ತಿಂಗಳಿಗೇನೇ ಸಿಹಿ ಸುದ್ದಿ ನೀಡಿರುವ ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಷ್ಟೇ ಅಲ್ಲದೇ ಬಿಟೌನ್ ಸ್ಟಾರ್ಸ್ ಎಲ್ಲರೂ ಶುಭ ಹಾರೈಸಿದರು. ಸದ್ಯ ಬಿಟೌನ್‌ನಲ್ಲಿ ರಣ್‌ಬೀರ್ ಕಪೂರ್ ಕುರಿತ ಒಂದು ಸುದ್ದಿ ಸಖತ್ ವೈರಲ್ ಆಗ್ತಿದೆ.
ಪತ್ನಿ ಆಲಿಯಾ ಭಟ್ ಗರ್ಭಿಣಿ ಆಗಿರುವ ಸಂದರ್ಭದಲ್ಲಿ ರಣ್‌ಬೀರ್ ಕಪೂರ್ ಬೇರೆ ನಟಿಯ ಜೊತೆಗೆ ಸಖತ್ ಹಾಟ್ ಲುಕ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿತೋ ನೆಟ್ಟಿಗರು ರಣ್‌ಬೀರ್‌ಗೆ ಕ್ಲಾಸ್ ತಗೊಂಡಿದ್ದಾರೆ. ಶಂಷೇರಾ ಚಿತ್ರಕ್ಕಾಗಿ ನಟಿ ವಾಣಿ ಕಪೂರ್ ಜೊತೆ ಪೋಟೋಶೂಟ್ ಮಾಡಿಸಿರೋ ರಣ್‌ಬೀರ್ ಹಾಟ್ ದೃಶ್ಯಗಳಲ್ಲಿ ಕಾಣಿಸಿದ್ದಾರೆ.
ಈಗಾಗಲೇ ಹಲವು ನಟಿಯರ ಜೊತೆ ಲವ್ವಿ ಡವ್ವಿ ನಡೆಸಿದ್ದ ಕಾರಣದಿಂದ ನಟ ರಣ್‌ಬೀರ್ ಕಪೂರ್ ಸಖತ್ ಸುದ್ದಿಯಾಗಿದ್ರು. ದೀಪಿಕಾ ಪಡುಕೋಣೆ, ಮಹಿರಾ ಖಾನ್, ಕತ್ರೀನಾ ಕೈಫ್ ನಟಿಯರ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು ಅಂತ ಎಲ್ಲರಿಗೂ ಗೊತ್ತಿರೋ ವಿಷಯ. ಕಾಮನ್ನಾಗಿ ಮದುವೆಯಾದ ಬಳಿಕ ಗಂಡ, ಹೆಂಡತಿ ಇಬ್ಬರೂ ಸಹ ಹಾಟ್ ಸೀನ್‌ಗಳಲ್ಲಿ ನಟಿಸೋದು ವಿರಳ, ಆದರೆ ಇಲ್ಲಿ ನಟ ರಣ್‌ಬೀರ್ ಕಪೂರ್ ವಾಣಿ ಕಪೂರ್ ಜೊತೆ ಪೋಸ್ ಕೊಟ್ಟಿರೋ ಫೋಟೋ ಎಲ್ಲೆಡೆ ವೈರಲ್ಲಾಗ್ತಿದ್ದು, ಇದನ್ನ ನೋಡಿದ ಅಭಿಮಾನಿಗಳು ಇದನ್ನೆಲ್ಲಾ ಆಲಿಯಾ ಭಟ್ ನೋಡಿದರೆ ನಿಮ್ಮ ಕಥೆ ಮುಗೀತು. ಜೊತೆಗೆ ವಾಣಿ ಕಪೂರ್‌ಗೆ ಆಲಿಯಾ ಭಟ್ ಬಾಟೆಲ್ ತಗೊಂಡು ಬರ್ತಾರೆ ಹುಷಾರ್ ಅಂತ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ಹಾಗಂತ ಇದು ಪ್ರೊಫೆಶನಲ್ ಅಷ್ಟೇ, ಪರ್ಸನಲ್ ಅಲ್ಲ ಅನ್ನೋದು ಕಾಮನ್ ವಿಷಯ. ಆದರೂ ಈ ಫೋಟೋ ನೋಡಿ ಬಿ-ಟೌನ್ ಫ್ಯಾನ್ಸ್ ಅಂತೂ ಇಬ್ರಿಗೂ ಕಾಲೆಳೆಯುತ್ತಿದ್ದಾರೆ.