Sunday, October 27, 2024

Latest Posts

ಮಹಿಳಾ ಹಾಕಿ: ಭಾರತಕ್ಕೆ ಸೋಲು

- Advertisement -

ಹೊಸದಿಲ್ಲಿ: ಮಹಿಳಾ ವಿಶ್ವ ಕಪ್ ಹಾಕಿಯ ಬಿ ಬಣದ ಪಂದ್ಯದಲ್ಲಿ ಭಾರತವು ತನ್ನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-4 ಗೋಲುಗಳ ಸೋಲು ಕಂಡಿತು. ಆದರೂ ಭಾರತವು ವಿಶ್ವಕಪ್‍ನ ಕ್ವಾರ್ಟರ್ ಫೈನಲ್ ಹಂತಕ್ಕೆ ತೇರ್ಗಡೆ ಪಡೆಯುವ ಅವಕಾಶಗಳು ಇನ್ನೂ ಇವೆ.

ಭಾರತವು ಮೊದಲ ಎರಡು ಪಂದ್ಯಗಳಲ್ಲಿ ಡ್ರಾ ಸಾಸಿತ್ತು. ಪ್ರಸ್ತುತ ನ್ಯೂಜಿಲೆಂಡ್ 7 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಇಂಗ್ಲೆಂಡ್ 4 ಅಂಕ ಗಳಿಸಿದೆ. ಭಾರತವು ಚೀನಾ ಜತೆಗೆ 2 ಅಂಕಗಳ ಸಮಾನತೆ ಸಾಸಿದೆ.

ನಿಯಮದ ಪ್ರಕಾರ ನಾಲ್ಕು ಬಣಗಳಲ್ಲಿನ ಅಗ್ರಸ್ಥಾನಿ ಎರಡು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲಿಗೆ ಪ್ರವೇಶ ಪಡೆಯುತ್ತವೆ. ಆದರೆ ಉಳಿದ ಕೆಲವು ಸ್ಥಾನಗಳಿಗಾಗಿ ಇನ್ನಿತರ ಕೆಲವು ತಂಡಗಳಿಗೂ ಮೇಲೇರುವ ಅವಕಾಶವಿದ್ದು ಅವು ಕ್ರಾಸ್‍ಓವರ್ ಪಂದ್ಯ ಆಡಬೇಕಿದೆ.

ಭಾರತವು ಕ್ರಾಸ್‍ಓವರ್ ಪಂದ್ಯವನ್ನು ಸ್ಪೇನ್ ವಿರುದ್ಧ ಆಡಬೇಕಾಗಿದೆ. ಇದರಲ್ಲಿ ಗೆಲ್ಲುವ ತಂಡವು ಕ್ವಾರ್ಟರ್ ಫೈನಲಿನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗುವುದು.

- Advertisement -

Latest Posts

Don't Miss