ಚುನಾವಣೆಗಾಗಿ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಿದ ಎಐಸಿಸಿ: ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ಎಐಸಿಸಿಯು ಕರ್ನಾಟಕ ವಿಧಾನಸಭೆ ಚುನಾವಣೆ ಉದ್ದೇಶದಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು 28 ಪ್ರಮುಖ ನಾಯಕರನ್ನೊಳಗೊಂಡ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಮಿತಿಯ ಸಂಚಾಲಕರಾಗಿದ್ದಾರೆ. ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸದಸ್ಯರಾಗಿದ್ದಾರೆ.

ಇವರೊಂದಿಗೆ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ವೀರಪ್ಪ ಮೊಯಿಲಿ, ಮಾರ್ಗರೇಟ್ ಆಳ್ವಾ, ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಧ್ರುವನಾರಾಯಣ, ಸಂಸದ ಡಿ.ಕೆ.ಸುರೇಶ್, ಯು.ಟಿ.ಖಾದರ್, ರಮೇಶ್ ಕುಮಾರ್, ಕೆ.ಜೆ.ಜಾರ್ಜ್, ಸುನೀಲ್ ಕಾನುಗೋಳ್, ಕೃಷ್ಣಬೈರೇಗೌಡ, ಬಿ.ವಿ.ಶ್ರೀನಿವಾಸ್, ಆರ್.ವಿ.ದೇಶಪಾಂಡೆ, ಅಲ್ಲಂ ವೀರಭದ್ರಪ್ಪ, ಬೋಸರಾಜು, ಎಐಸಿಸಿ ಕಾರ್ಯದರ್ಶಿ ಸಂದೀಪ್ ಕೂಡ ಸದಸ್ಯರಾಗಿರುತ್ತಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರಾದ ಆಂಜನೇಯ, ರಾಮಾನಥ ರೈ, ವಿನಯ್‌ಕುಮಾರ್ ಸೊರಕೆ , ರಾಣಿ ಸತೀಶ್, ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಇದ್ದಾರೆ.

ಉಸ್ತುವಾರಿಗೆ ಬಲ ತುಂಬಲು ಐವರು ಮುಖಂಡರ ನೇಮಿಸಿದ ಕಾಂಗ್ರೆಸ್

ರಾಜ್ಯದ ವಿಧಾನಸಭಾ ಚುನಾವಣೆಗೆ ಹಂತಹಂತವಾಗಿ ಸಜ್ಜಾಗುತ್ತಿರುವ ಕಾಂಗ್ರೆಸ್ ಇದೀಗ ಪ್ರಧಾನಕಾರ್ಯದರ್ಶಿ ಸಹಿತ ಉಸ್ತುವಾರಿ ಜತೆ ಕೆಲಸ ಮಾಡಲು ಐವರು ಪ್ರಭಾರಿಗಳನ್ನು ನೇಮಕ ಮಾಡಿದೆ.

ತೆಲಂಗಾಣ ಶಾಸಕ ಡಿ.ಶ್ರೀಧರ ಬಾಬು, ಕೇರಳ ಶಾಸಕ ಪಿ.ಸಿ.ವಿಷ್ಣುನಾಧ್ ಹಾಗೂ ರೋಜಿ ಎಂ. ಜಾನ್, ಮಯೂರ ಎಸ್.ಜಯಕುಮಾರ್, ದೆಹಲಿಯ ಅಭಿಷೇಕ್ ದತ್ತ ಅವರನ್ನು ಚುನಾವಣೆ ಉದ್ದೇಶದಲ್ಲಿ ನಿಯೋಜಿಸಿ ಎಐಸಿಸಿ ಆದೇಶ ಹೊರಡಿಸಿದೆ.

About The Author