Tuesday, December 24, 2024

Latest Posts

ಕೊಹ್ಲಿಯ ಬ್ಯಾಟಿಂಗ್ ಗುಣಮಟ್ಟವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ರೋಹಿತ್ ಶರ್ಮಾ

- Advertisement -

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಗುಣಮಟ್ಟವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡೆಸಿದ್ದಾರೆ. ಈ ಮೂಲಕ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಬಳಿಕ ಮಾತನಾಡಿದ ರೋಹಿತ್, ತಂಡದ ಒಳಗೆ ಎನಾಗಿರುತ್ತದೆಯೋ ಎಂಬುದು ತಜ್ಞರಿಗೆ ತಿಳಿದಿರುವುದಿಲ್ಲ. ನಮಗಿದು ಕಷ್ಟವೇನಲ್ಲ. ಏಕೆಂದರೆ ಹೊರಗಡೆಯ ಸದ್ದು ನಮಗೆ ಕೇಳಿಸದು. ಈ ತಜ್ಞರು ಎಂಬುವವರು ಯಾರು, ಅವರನ್ನು ಯಾಕೆ ತಜ್ಞರೆಂದು ಕರೆಯುತ್ತಾರೆ ಎಂಬುದು ನನಗೆ ತಿಳಿದಿಲ್ಲ. ನನಗೆ ಅದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಅವರ ದೀರ್ಘಕಾಲದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದರು.

ಪ್ರತಿಷ್ಠೆಯ ಆಧಾರದಲ್ಲಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಬಾರದು. ಪ್ರಸಕ್ತ ಸನ್ನಿವೇಶದಲ್ಲಿ ಅವರ ಫಾರ್ಮ್ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕು ಎಂದು ಕಪಿಲ್ ದೇವ್ ಹೇಳಿದ್ದರು. ಕೊಹ್ಲಿಗೆ ಮೂರು ತಿಂಗಳು ವಿಶ್ರಾಂತಿ ನೀಡುವ ಅಗತ್ಯವಿದೆ ಎಂದು ವಾನ್ ಹೇಳಿದ್ದರು. 2019ರ ನವೆಂಬರ್ ಬಳಿಕ ಕ್ರಿಕೆಟ್‍ನ ಯಾವುದೇ ಮಾದರಿಯಲ್ಲಿಯೂ ಕೊಹ್ಲಿ ಒಂದೇ ಒಂದು ಶತಕ ದಾಖಲಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಲ್ಲ.

ಕೊಹ್ಲಿ ಫಾರ್ಮ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಮಧ್ಯೆಯೇ ಐದು ತಿಂಗಳ ಬಳಿಕ ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ತಂಡಕ್ಕೆ ಮರಳಿದ್ದರು. ಕೊಹ್ಲಿ ಅನುಪಸ್ಥಿತಿಯಲ್ಲಿ ದೀಪಕ್ ಹೂಡಾ ಅವರಿಗೆ ತಂಡದಲ್ಲಿ ಸ್ಥಾನ ದೊರೆತಿತ್ತು. ಆದರೆ ಐಲೆರ್ಂಡ್ ವಿರುದ್ಧ ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ಬಿಟ್ಟರೆ ಉಳಿದಂತೆ ಹೂಡಾ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ.

- Advertisement -

Latest Posts

Don't Miss