ಲಂಡನ್:ಆಂಗ್ಲರ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದ ಬೆನ್ನಲ್ಲೆ ಟೀಮ್ ಇಂಡಿಯಾ ಐಸಿಸಿ ರಾಂಕಿಂಗ್ ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ.
ಮೊದಲ ಪಂದ್ಯಕ್ಕೂ ಮುನ್ನ ಏಕದಿನ ರಾಂಕಿಂಗ್ನಲ್ಲಿ 105 ಅಂಕಗಳಿಸಿತ್ತು. ಇದೀಗ 10 ವಿಕೆಟ್ ಗಳ ಭರ್ಜರಿ ಗೆಲುವು ಪಡೆದ ನಂತರ 108 ಅಂಕ ಪಡೆದಿದೆ. ಪಾಕಿಸ್ತಾನ 106 ಅಂಕ ಪಡೆದಿದೆ.
ನ್ಯೂಜಿಲೆಂಡ್ ತಂಡ 126 ಅಂಕ ಪಡೆದು ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ 122 ಅಂಕ ಪಡೆದು ಎರಡನೆ ಸ್ಥಾನದಲ್ಲಿದೆ.
ಮೊದಲ ಪಂದ್ಯದಲ್ಲಿ ಭಾರತ ಆತಿಥೇಯರನ್ನು 110 ರನ್ ಗಳಿಸಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿತ್ತು.
ಬುಮ್ರಾ 19 ರನ್ ನೀಡಿ ಬರೋಬ್ಬರಿ 6 ವಿಕೆಟ್ ಪಡೆದಿದ್ದರು. 2014ರಲ್ಲಿ ಕನ್ನಡಿಗ ಸ್ಟುವರ್ಟ್ ಬಿನ್ನಿ ಬಾಂಗ್ಲಾದೇಶ ವಿರುದ್ಧ 6ರನ್ ನೀಡಿ 4 ವಿಕೆಟ್ ಪಡೆದಿದ್ದರು. 1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 12 ರನ್ ನೀಡಿ6 ವಿಕೆಟ್ ಪಡೆದಿದ್ದಾರೆ.
ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

