Thursday, June 19, 2025

Latest Posts

ಪವರ್ ಸ್ಟಾರ್ ಟ್ವಿಟರ್‌ನಲ್ಲಿ ನೀಲಿ ಟಿಕ್ ಮಾಯ..!

- Advertisement -

ಸ್ಟಾರ್ ನಟ-ನಟಿಯರು ಹಾಗೂ ಅಭಿಮಾನಿಗಳ ಮಧ್ಯೆ ಸಂಪರ್ಕದ ಕೊಂಡಿಯಾಗಿರೋದು ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲ. ಪ್ರತಿಯೊಬ್ಬರೂ ಸಹ ಸೋಶಿಯಲ್ ಮೀಡಿಯಾವನ್ನ ಉಪಯೋಗಿಸುತ್ತಾರೆ. ಸ್ಟಾರ್‌ಗಳ ಸಿನಿಮಾಗಳ ಬಗ್ಗೆ ಹಾಗಿರಬಹುದು, ವೈಯುಕ್ತಿಕ ಜೀವನದ ಬಗ್ಗೆ, ಅಥವಾ ಅವರ ಹವ್ಯಾಸಗಳು ಹೀಗೆ ಪ್ರತಿಯೊಂದನ್ನೂ ಸದಾ ಅಪ್ಡೇಟ್ ಮಾಡೋದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲೇನೆ. ಅದೇರೀತಿ ಸೆಲೆಬ್ರೆಟಿಗಳು ಅಂದ್ಮೇಲೆ ಅವರ ಖಾತೆಗಳನ್ನ ನಕಲು ಮಾಡುವವರು ಇರುತ್ತಾರೆ.

ಸ್ಟಾರ್‌ಗಳ ಹೆಸರಿನಂದಲೇ ಬೇರೆ ಖಾತೆಯನ್ನ ತೆರೆಯಬಹುದು. ಈ ಕಾರಣಕ್ಕೆ ಟ್ವಿಟ್ಟರ್ ತನ್ನ ಬಳಕೆದಾರರಿಗೆ ನೀಲಿ ಟಿಕ್‌ನು ನೀಡುತ್ತೆ. ಇ ಮೂಲಕ ಅವರ ಅಧಿಕೃತ ಎಂದು ಧೃಢೀಕರಿಸುತ್ತೆ. ಬೇಸರದ ಸಂಗತಿಯೆAದರೆ ನಮ್ಮೆಲ್ಲರ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವ್ರ ಟ್ವಿಟ್ಟರ್ ಖಾತೆಯಲ್ಲಿ ಬ್ಲೂ ಟಿಕ್‌ನ ತೆಗೆದು ಹಾಕಿದ್ದಾರೆ. ಸದ್ಯ ಈ ವಿಷಯ ಅಭಿಮಾನಿಗಳಿಗೆ ತೀರಾನೇ ನೋವು ತಂದಿದೆ.

ಅಪ್ಪು ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಿದ್ದೇಕೆ..?

ಎಲ್ಲರಿಗೂ ತಿಳಿದಿರುವಂತೆ ಅಪ್ಪು ನಮ್ಮೆಲ್ಲರನ್ನು ಅಗಲಿ ೯ ತಿಂಗಳುಗಳೇ ಕಳೆದು ಹೋಗಿದೆ. ಹಾಗಾಗಿ ಅವರ ಟ್ವಿಟ್ಟರ್ ಅಕೌಂಟ್ ಸಹ ಕಾರ್ಯ ನಿರತವಾಗಿಲ್ಲದ ಕಾರಣ, ಟ್ವಿಟ್ಟರ್ ಅಧಿಕೃತವಾಗಿ ಅಪ್ಪು ಖಾತೆಯಿಂದ ಬ್ಲೂ ಟಿಕ್‌ನ ಅಳಿಸಿದ್ದಾರೆ.

ಆಕ್ರೋಷ ವ್ಯಕ್ತಪಡಿಸುತ್ತಿರೋ ಅಪ್ಪು ಅಭಿಮಾನಿಗಳು..!

ಅಪ್ಪು ಅಕೌಂಟ್‌ನಿAದ ಬ್ಲೂ ಟಿಕ್ ತೆಗೆದು ಹಾಕಿರುವುದಕ್ಕೆ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಅವ್ರ ಟ್ವಿಟ್ಟರ್ ಅಕೌಂಟ್‌ನಿAದ ಇನ್ನೂ ಬ್ಲೂ ಟಿಕ್ ತೆಗೆದಿಲ್ಲ, ಆದರೆ ನಮ್ಮ ಅಪ್ಪು ಸರ್ ಖಾತೆಯಿಂದ ಬ್ಲೂ ಟಿಕ್ ಡಿಲೀಟ್ ಮಾಡಿರೋದ್ಯಾಕೆ ಅಂತ ಅಪ್ಪು ಫ್ಯಾನ್ಸ್ ಟ್ವೀಟ್ ಮಾಡೋ ಮೂಲಕವೇ ಟ್ವಿಟ್ಟರ್ ಸಂಸ್ಥೆಗೆ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಅಪ್ಪು ಅಬಿಮಾನಿಗಳೆಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss